ಕುಶಾಲನಗರ, ಡಿ. 14: ಕುಶಾಲನಗರ ಅಯ್ಯಪ್ಪ ದೇವಾಲಯದಲ್ಲಿ ಮಂಡಲ ಪೂಜೋತ್ಸವ ಹಿನ್ನೆಲೆ ದೇವಾಲಯದ ಧ್ವಜಾರೋಹಣ ಕಾರ್ಯಕ್ರಮ ಜರುಗಿತು. ಮೂರು ದಿನಗಳ ಕಾಲ ನಡೆಯಲಿರುವ ಮಂಡಲ ಪೂಜೆ ಹಿನ್ನೆಲೆ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ವಿಧಿಗಳು ನಡೆದವು.
ಅಯ್ಯಪ್ಪಸ್ವಾಮಿ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ನಡೆಯುತ್ತಿರುವ ಪೂಜೆ ಅಂಗವಾಗಿ ಬೆಳಿಗ್ಗೆ ಗಣಪತಿ ಹೋಮ ಮತ್ತು ಸಂಜೆ ಉಯ್ಯಾಲೋತ್ಸವ ನಡೆಯಿತು. ಬುಧವಾರದಂದು ಶಾಸ್ತ ಪೂಜೆ, ಅಭಿಷೇಕ ಮತ್ತಿತರ ಉತ್ಸವ ಕಾರ್ಯಕ್ರಮಗಳು ಜರುಗಲಿವೆ ಎಂದು ಟ್ರಸ್ಟ್ ಅಧ್ಯಕ್ಷ ಗಣಪತಿ ತಿಳಿಸಿದರು.
ಅರ್ಚಕರಾದ ವಿಷ್ಣುಮೂರ್ತಿ ಭಟ್, ಕೃಷ್ಣಮೂರ್ತಿ ಭಟ್, ಸೋಮಶೇಖರ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭ ದೇವಾಲಯ ಟ್ರಸ್ಟ್‍ನ ಪ್ರಮುಖರಾದ ಎಸ್.ಕೆ. ಶ್ರೀನಿವಾಸರಾವ್, ಕೆ.ಆರ್. ಶಿವಾನಂದನ್, ಡಿ.ಆರ್. ಸೋಮಶೇಖರ್, ಮಣಿ, ಎಂ.ಎನ್. ಚಂದ್ರಮೋಹನ್, ಪ.ಪಂ. ಸದಸ್ಯ ಡಿ.ಕೆ. ತಿಮ್ಮಪ್ಪ, ಪೂಜಾ ಸೇವಾರ್ಥದಾರರಾದ ಜಗದೀಶ್, ರಂಗನಾಥ್ ಮತ್ತಿತರರು ಇದ್ದರು.