ಗೋಣಿಕೊಪ್ಪ ವರದಿ, ಡಿ. 14: ಹಾಕಿ ಕರ್ನಾಟಕ ಮತ್ತು ಹಾಕಿ ಕೂರ್ಗ್ ವತಿಯಿಂದ ತಾ. 15 ರಿಂದ ತಾ. 20 ರವರೆಗೆ ಕೂರ್ಗ್ ಪ್ರೀಮಿಯರ್ ಹಾಕಿ ಲೀಗ್ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಟೂರ್ನಿ ಉದ್ಘಾಟನೆ ನಡೆಯಲಿದೆ.
ಹಾಕಿ ಕೂರ್ಗ್ ಪ್ರಧಾನ ಕಾರ್ಯದರ್ಶಿ ಬುಟ್ಟಿಯಂಡ ಚೆಂಗಪ್ಪ, ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ಹಾಕಿ ಕೂರ್ಗ್ ನಿರ್ದೇಶಕ ಕುಲ್ಲಚಂಡ ಬೋಪಣ್ಣ, ನಾಪೋಕ್ಲು ಕೊಡವ ಸಮಾಜ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಕೋರಲ್ ವಾಟರ್ಸ್ ನಿರ್ದೇಶಕ ಕೃಷ್ಣ ಮೈಲಾವರ್ಪು, ಉದ್ಯಮಿ ಮುಂಡಚಾಡೀರ ಮದನ್ ಮಂದಣ್ಣ, ಗೋರ್ಸ್ ತಂಡದ ಮಾಲೀಕ ಗುಮ್ಮಟ್ಟೀರ ಮುತ್ತಣ್ಣ, ಜೀಯಣ್ಣ ತಂಡದ ಮಾಲೀಕ ಕಾಳಿಮಾಡ ಶತ್, ಪ್ರಗತಿ ಮಾಲೀಕ ಮಾದಂಡ ತಿಮ್ಮಯ್ಯ, ಪವಿನ್ ಪೊನ್ನಣ್ಣ ತಂಡದ ಮಾಲೀಕ ಅರೆಯಡ ಪವಿನ್ ಪೊನ್ನಣ್ಣ ಭಾಗವಹಿಸಲಿದ್ದಾರೆ.
ಒಟ್ಟು ಐದು ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು, ಆಟಗಾರರನ್ನು ಬಿಡ್ಡಿಂಗ್ ಮೂಲಕ ಖರೀದಿಸಿ ತಂಡ ರಚಿಸಲಾಗಿದೆ. ತಾ. 18 ರವರೆಗೆ ಲೀಗ್ ಹಂತದ ಪಂದ್ಯಗಳು ನಡೆಯಲಿವೆ. ಪೂಲ್ನಲ್ಲಿ ಮೊದಲ ಸ್ಥಾನ ಅಲಂಕರಿಸಿರುವ ತಂಡ ನೇರವಾಗಿ ಫೈನಲ್ ಆಡಲಿದೆ. ಪ್ಲೇ ಆಫ್ ಮೂಲಕ ಅಂತಿಮ ಹಣಾಹಣಿಗೆ ಮತ್ತೊಂದು ತಂಡ ಸ್ಪರ್ಧಿಸಲಿದೆ.
ಇಂದಿನ ಪಂದ್ಯಗಳು
ಬೆ. 10 ಗೋರ್ಸ್ - ಪವಿನ್ ಪೊನ್ನಣ್ಣ ಫೌಂಡೇಷನ್
ಬೆ. 11.15 ಸೌತ್ ಕೂರ್ಗ್ ಕ್ಲಬ್ - ಜಿಯಣ್ಣ ಗ್ರೂಪ್ಸ್
ಮ. 3 ಗೋರ್ಸ್ - ಪ್ರಗತಿ ಸ್ಪೋಟ್ರ್ಸ್ ಅಕಾಡೆಮಿ
ಮ. 4.15 ಪವಿನ್ ಪೊನ್ನಣ್ಣ ಫೌಂಡೇಷನ್ - ಸೌತ್ ಕೂರ್ಗ್ ಕ್ಲಬ್