ಮಡಿಕೇರಿ, ಡಿ. 14: ಬೋಯಿಕೇರಿ ಫುಟ್ಬಾಲ್ ಕ್ಲಬ್ (ಬಿ.ಎಫ್.ಸಿ) ವತಿಯಿಂದ ಜನವರಿ 8 ರಿಂದ 10 ರವರೆಗೆ ಪ್ರಥಮ ಬಾರಿಗೆ ರಾಜ್ಯಮಟ್ಟದ 5+2 ಜನರ ಕಾಲ್ಚೆಂಡು ಪಂದ್ಯಾಟ ಬೋಯಿಕೇರಿಯ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೋಂದಾಯಿಸಿಕೊಳ್ಳುವ ತಂಡಗಳಿಗೆ ಮಾತ್ರ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶವಿದ್ದು, ಆಸಕ್ತ ತಂಡಗಳು ಜನವರಿ 5 ರೊಳಗೆ ನೋಂದಾಯಿಸಬಹುದಾಗಿದೆ.
ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ರೂ. 25,555 ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. 15,555 ಹಾಗೂ ಟ್ರೋಫಿ, ತೃತೀಯ ಸ್ಥಾನ ಪಡೆದ ತಂಡಕ್ಕೆ ಟ್ರೋಫಿ ಮತ್ತು ವೈಯಕ್ತಿಕ ಬಹುಮಾನಗಳನ್ನು ಹಾಗೂ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಬೆಸ್ಟ್ ಪ್ಲೇಯರ್ ಆಫ್ ದೀ ಟೂರ್ನಮೆಂಟ್, ಬೆಸ್ಟ್ ಡಿಫೆಂಡರ್, ಹೈಯೆಸ್ಟ್ ಸ್ಕೋರರ್ ಪ್ರಸ್ತಿಗಳನ್ನು ನೀಡಲಾಗುತ್ತದೆ.
ಫೈನಲ್ ಪಂದ್ಯಕ್ಕೂ ಮುನ್ನ ಯುವತಿಯರ ಪ್ರದರ್ಶನ ಪಂದ್ಯಾಟ ನಡೆಯಲಿದ್ದು, ಕೋವಿಡ್-19 ಮಾರ್ಗಸೂಚಿಯಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪಂದ್ಯಾವಳಿಯು ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ನಿತಿನ್ 9480511394, ಶಿವ 8762417367, ಚಂದ್ರ 9741483649, ಸುನಿಲ್ 9482979496 - (ಗೂಗ್ಲ್ ಪೇ) ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.