ನಾಪೆÉÇೀಕ್ಲು, ಡಿ. 12: ಗ್ರಾಮ ಪಂಚಾಯಿತಿಯ ಚುನಾವಣೆಗೆ ಇಂದು ನಾಮಪತ್ರ ಪರೀಶಿಲಿಸಲಾಗಿ ಒಟ್ಟು 67 ನಾಮಪತ್ರಗಳಲ್ಲಿ ಎರಡು ನಾಮಪತ್ರ ತಿರಸ್ಕøತವಾಗಿದ್ದು, ನಾಲ್ಕು ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ 19 ವಾರ್ಡ್‍ಗೆ 61 ಜನ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಕೊಳಕೇರಿ 2ರಲ್ಲಿ ಸ್ಪರ್ಧಿಸಿದ್ದ ಕುಲ್ಲೇಟಿರ ಹೇಮಾವತಿ ಅರುಣ ಮತ್ತು ಕೊಳಕೇರಿ 1ರಲ್ಲಿ ಸ್ಪರ್ಧಿಸಿದ್ದ, ಕನ್ನಂಭಿರ ಸುಧಿ ತಿಮ್ಮಯ್ಯ, ಕೋಟೆರ ನೀಲಮ್ಮ ಮತ್ತು ಕುಂಬಾರರ ಅಶೋಕ್ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಗುರುಸ್ವಾಮಿ ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ಕೊಪ್ಪಡ ಶರಣ್ ಕಾರ್ಯನಿರ್ವಹಿಸಿದರು.