ಸುಂಟಿಕೊಪ್ಪ, ಡಿ. 12: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಉಲುಗುಲಿ 1ನೇ ವಾರ್ಡ್‍ನಿಂದ ಮಾವ-ಸೊಸೆ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣಾ ಅಖಾಡ ಕಾವೇರಿದೆ.

ಈ ಬಾರಿ ಸುಂಟಿಕೊಪ್ಪದ ಉಲುಗುಲಿ 1ನೇ ವಾರ್ಡಿನಿಂದ ಮಾಜಿ ಸದಸ್ಯರಾದ ಸಿ. ಚಂದ್ರ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರೆ, ಮಹಿಳಾ ಕ್ಷೇತ್ರಕ್ಕೆ ಸೊಸೆ ವನಿತ ಎಂ. ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೂಲಕ ಅಖಾಡಕ್ಕೆ ಧುಮುಕಿದ್ದಾರೆ.