ಮಡಿಕೇರಿ, ಡಿ. 13: ಮಡಿಕೇರಿಯ ಕೊಡಗು ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸಂಸ್ಥೆಯ ಮಹಾಸಭೆ ಮಡಿಕೇರಿ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷ ಮಂಡುವಂಡ ಪಿ. ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಕುರಿತು ಚರ್ಚೆ ನಡೆಯಿತು. ಅಧ್ಯಕ್ಷ ಎಂ.ಪಿ. ಮುತ್ತಪ್ಪ ಅವರು ಮಾತನಾಡಿ, ಸಹಕಾರಿಯ ಸ್ಥಾಪನೆಗೆ ಮಾಜಿ ಸಚಿವ ಯಂ.ಸಿ. ನಾಣಯ್ಯ ಅವರು ಕಾರಣಕರ್ತ ರಾಗಿದ್ದಾರೆ. ಈ ಸಂಸ್ಥೆಯು 2005ನೇ ಇಸವಿಯಲ್ಲಿ ಸ್ಥಾಪನೆ ಗೊಂಡು ಕೊಡಗು ಜಿಲ್ಲೆಯಾದ್ಯಂತ ಕಾರ್ಯವ್ಯಾಪ್ತಿಯನ್ನೊಳ ಗೊಂಡಿರುವುದಾಗಿಯೂ ಇದೀಗ 2133 ಸದಸ್ಯರಿರುತ್ತಾರೆಂಬುದಾಗಿ ತಿಳಿಸಿದರು. ಸಹಕಾರಿಯ ಮೂಲಕ ಜಾಮೀನು ಸಾಲ, ಆಭರಣ ಸಾಲ, ಮನೆ ನಿರ್ಮಾಣ ಸಾಲಗಳನ್ನು ನಿಗದಿತ ಬಡ್ಡಿ ದರದಲ್ಲಿ ನೀಡುತ್ತಿದ್ದು, ವಿವಿಧ ರೀತಿಯ ಠೇವಣಿ ಸಂಗ್ರಹಿಸಲಾಗುತ್ತಿದೆ. ಹಾಗೆಯೇ ಸಹಕಾರಿಯ ಮುಖಾಂತರ ಆರ್‍ಟಿಸಿ ಮತ್ತು ಇ-ಸ್ಟಾಪಿಂಗ್ ನೀಡುವ ಸೌಲಭ್ಯವನ್ನು ಅಳವಡಿಸಲಾಗಿದೆ. ಇದರ ಪ್ರಯೋಜನವನ್ನು ಎಲ್ಲರೂ ಸದುಯೋಗಪಡೆದುಕೊಳ್ಳಬೇಕಾಗಿ ಕೋರಿದರು.

ಸಹಕಾರಿಯ ಮೂಲಕ ಸಾಧನೆ ಮಾಡಿದ ಸದಸ್ಯರಿಗೆ ಮತ್ತು ಹತ್ತನೆ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಒಬ್ಬರಿಗೆ ಪ್ರೋತ್ಸಾಹಕ ಧನ ನೀಡಲಾಗುತ್ತಿದೆ ಮತ್ತು ಕೋವಿಡ್ -19 ವಾರಿಯರ್ಸ್‍ಗೆ ಕೊಡವ ಸಮಾಜದ ಮೂಲಕ ಊಟದ ವ್ಯವಸ್ಥೆಗೆ ಕೈ ಜೋಡಿಸಿದ್ದು ಹಾಗೂ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಿದ್ದುದನ್ನು ತಿಳಿಸಿದರು. ಸರ್ವ ಸದಸ್ಯರು ಆಡಳಿತ ಮಂಡಳಿಯ ಮತ್ತು ಸಿಬ್ಬಂದಿ ವರ್ಗದವರ ಪರಸ್ಪರ ಸಹಾಯ ಮತ್ತು ಪರಿಶ್ರಮದಿಂದ ಸಹಕಾರಿಯು ಈ ವರ್ಷ ರೂ. 19,09,269 ಲಕ್ಷ ಲಾಭಗಳಿಸಿದ್ದು, ಇನ್ನಷ್ಟು ಪ್ರಗತಿಯನ್ನು ಸಾಧಿಸಲು ಪ್ರಯತ್ನಿಸಲಾಗುವುದು ಎಂಬುದಾಗಿ ತಿಳಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಯಂ.ಜಿ. ಉಷಾ (ಅಂಜಪರವಂಡ) ನಿರ್ದೇಶಕರುಗಳಾದ ಚೋವಂಡ ಡಿ. ಕಾಳಪ್ಪ, ಆಲೆಮಾಡ ಕೆ. ಕಾರ್ಯಪ್ಪ, ಮಣವಟ್ಟೀರ ಬಿ. ಮಾಚಯ್ಯ, ನಾಟೋಳಂಡ ಡಿ. ಚರ್ಮಣ, ಕೊಂಗಾಂಡ ಎ. ತಿಮ್ಮಯ್ಯ, ಪಟ್ಟಡ ಎ. ಕರುಂಬಯ್ಯ, ಚೊಟ್ಟೆಯಾಂಡಮಾಡ ಬೇಬಿ ಪೂವಯ್ಯ, ಕುಡುವಂಡ ಬಿ. ಉತ್ತಪ್ಪ, ನಂದೇಟಿರ ಪಿ. ರಾಜ ಮಾದಪ್ಪ, ಕೇಕಡ ಯಂ. ಸುಗುಣ, ಶಾಂತೆಯಂಡ ಟಿ. ದೇವರಾಜ್, ಸರ್ವ ಸದಸ್ಯರು ಹಾಗೂ ಹಿರಿಯ ಸಹಕಾರಿ ಮೇರಿಯಂಡ ಸಿ. ನಾಣಯ್ಯ ಹಾಗೂ ವ್ಯವಸ್ಥಾಪಕಿ ಕೆ.ಎನ್. ಚೋಂದಮ್ಮ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.