ಮಡಿಕೇರಿ, ಡಿ. 12: ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕುಗಳ ಒಟ್ಟು 66 ಗ್ರಾ.ಪಂ.ಗಳ 778 ಸ್ಥಾನಗಳಿಗೆ ತಾ. 22 ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ಅಭ್ಯರ್ಥಿಗಳಿಂದ ಸಲ್ಲಿಸಲಾಗಿದ್ದ ನಾಮಪತ್ರಗಳ ಪರಿಶೀಲನಾ ಕಾರ್ಯ ಇಂದು ನಡೆಯಿತು. ಸಲ್ಲಿಕೆಯಾಗಿದ್ದ ಒಟ್ಟು 2564 ನಾಮಪತ್ರಗಳ ಪೈಕಿ 2466 ನಾಮಪತ್ರಗಳು ಅಂಗೀಕೃತಗೊಂಡಿವೆ. 89 ನಾಮಪತ್ರಗಳು ತಿರಸ್ಕøತಗೊಂಡಿವೆ.
ಮಡಿಕೇರಿ ತಾಲೂಕಿನ 26 ಗ್ರಾ.ಪಂ.ಗಳ 295 ಸ್ಥಾನಗಳಿಗೆ ಒಟ್ಟು 845 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈ ಪೈಕಿ 813 ನಾಮಪತ್ರಗಳು ಅಂಗೀಕೃತಗೊಂಡಿವೆ. 23 ನಾಮಪತ್ರಗಳು ತಿರಸ್ಕøತಗೊಂಡಿವೆ. ಸೋಮವಾಪೇಟೆ ತಾಲೂಕಿನ 40 ಗ್ರಾ.ಪಂ.ಗಳ 481 ಕ್ಷೇತ್ರಗಳಿಗೆ ಒಟ್ಟು 1719 ನಾಮಪತ್ರಗಳು ಸಲ್ಲಿಕೆಯಾಗಿವೆ. ಈ ಪೈಕಿ 1653 ನಾಮಪತ್ರಗಳು ಅಂಗೀಕೃತಗೊಂಡು, 66 ನಾಮಪತ್ರಗಳು ತಿರಸ್ಕøತಗೊಂಡಿವೆ.
ಕೊನೆಯ ದಿನವಾದ ತಾ. 11 ರಂದು ಮಡಿಕೇರಿ ತಾಲೂಕಿನಲ್ಲಿ 428 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 862 ನಾಮಪತ್ರಗಳು ಸಲ್ಲಿಕೆಯಾಗಿದ್ದವು.
ತಾ. 14 ರಂದು ನಾಮಪತ್ರಗಳನ್ನು ವಾಪಸ್ ಪಡೆಯಲು ಕೊನೆಯ ದಿನ. ವಾಪಸ್ ಪಡೆದ ಬಳಿಕ ಕಣದಲ್ಲಿ ಉಳಿಯುವ ಅಭ್ಯರ್ಥಿಗಳಿಗೆ ಅಭ್ಯರ್ಥಿಗಳು ಅಪೇಕ್ಷಿಸುವ ಚಿಹ್ನೆಗಳನ್ನು ನೀಡಲಾಗುವುದು.
ಸೋಮವಾರಪೇಟೆ ತಾಲೂಕು
ತಾಲೂಕಿನ 40 ಗ್ರಾಮ ಪಂಚಾಯಿತಿಗಳಿಗೆ ತಾ. 22 ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ 1719 ನಾಮಪತ್ರಗಳ ಪೈಕಿ 66 ನಾಮಪತ್ರಗಳು ತಿರಸ್ಕøತಗೊಂಡಿದ್ದು, 1653 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ತಹಶೀೀಲ್ದಾರ್ ಗೋವಿಂದರಾಜು ತಿಳಿಸಿದ್ದಾರೆ.
ಇಂದು ತಾಲೂಕಿನ 40 ಗ್ರಾ.ಪಂ. ಗಳಲ್ಲಿ ಬೆಳಗ್ಗಿನಿಂದ ಸಂಜೆಯವರೆಗೂ ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಿತು. ಹಲವಷ್ಟು ಮಂದಿ ಒಂದೇ ಕ್ಷೇತ್ರಕ್ಕೆ ಎರಡರಿಂದ ಮೂರು ನಾಮಪತ್ರಗಳನ್ನು ಸಲ್ಲಿಸಿದ್ದರಿಂದ ಹೆಚ್ಚುವರಿ ನಾಮಪತ್ರಗಳು ಹಾಗೂ ಅಗತ್ಯ ದಾಖಲಾತಿಗಳನ್ನು ಸಲ್ಲಿಸದ ಹಿನ್ನೆಲೆ ಕೆಲ ನಾಮಪತ್ರಗಳನ್ನು ತಿರಸ್ಕøತಗೊಳಿಸಲಾಯಿತು.
ಮಾದಾಪುರ ಗ್ರಾ.ಪಂ.ಯ 16 ಸ್ಥಾನಗಳಿಗೆ 60 ನಾಮಪತ್ರ ಸಲ್ಲಿಕೆಯಾಗಿದ್ದು, ಇದರಲ್ಲಿ 2 ತಿರಸ್ಕøತಗೊಂಡಿದೆ.
ಹಂಡ್ಲಿಯಲ್ಲಿ 11 ಸ್ಥಾನಗಳಿಗೆ 39 ನಾಮಪತ್ರ ಸಲ್ಲಿಕೆಯಾಗಿದ್ದು ಇದರಲ್ಲಿ 1 ನಾಮಪತ್ರ ತಿರಸ್ಕøತಗೊಂಡಿದೆ. ಆಲೂರು ಸಿದ್ದಾಪುರ ಗ್ರಾ.ಪಂ.ನ 15 ಸ್ಥಾನಗಳಿಗೆ 46 ನಾಮಪತ್ರ ಸಲ್ಲಿಕೆಯಾಗಿದ್ದು ಇದರಲ್ಲಿ 4 ತಿರಸ್ಕøತಗೊಂಡಿದೆ. ಗೌಡಳ್ಳಿಯ 10 ಸ್ಥಾನಗಳಿಗೆ 26 ಸಲ್ಲಿಕೆಯಾಗಿದ್ದು 1 ತಿರಸ್ಕøತ, ಚೌಡ್ಲು ಗ್ರಾ.ಪಂ.ನ 14 ಸ್ಥಾನಗಳಿಗೆ 43 ಸಲ್ಲಿಕೆಯಾಗಿದ್ದು 1 ತಿರಸ್ಕøತ, ಐಗೂರಿನ 11 ಸ್ಥಾನಗಳಿಗೆ 35 ನಾಮಪತ್ರ ಸಲ್ಲಿಕೆಯಾಗಿದ್ದು, ಇದರಲ್ಲಿ 2 ತಿರಸ್ಕøತಗೊಂಡಿದೆ.
ನೇರುಗಳಲೆಯ 12 ಸ್ಥಾನಗಳಿಗೆ 31 ನಾಮಪತ್ರ ಸಲ್ಲಿಕೆಯಾಗಿದ್ದು, 1 ತಿರಸ್ಕøತ, ನೆಲ್ಲಿಹುದಿಕೇರಿಯ 20 ಸ್ಥಾನಗಳಿಗೆ 63 ಸಲ್ಲಿಕೆಯಾಗಿದ್ದು, ಇದರಲ್ಲಿ 2, ಗುಡ್ಡೆಹೊಸೂರಿನ 18 ಸ್ಥಾನಗಳಿಗೆ 77 ಸಲ್ಲಿಕೆಯಾಗಿದ್ದು ಇದರಲ್ಲಿ 1, ಕೂಡಿಗೆಯ 15 ಸ್ಥಾನಗಳಿಗೆ 77 ನಾಮಪತ್ರ ಸಲ್ಲಿಕೆಯಾಗಿದ್ದು ಇದರಲ್ಲಿ 22 ನಾಮಪತ್ರಗಳು ತಿರಸ್ಕøತಗೊಂಡಿವೆ.
ಕೂಡುಮಂಗಳೂರಿನ 24 ಸ್ಥಾನಗಳಿಗೆ 95 ನಾಮಪತ್ರ ಸಲ್ಲಿಕೆಯಾಗಿದ್ದು ಇದರಲ್ಲಿ 6, ಮುಳ್ಳುಸೋಗೆಯ 23 ಸ್ಥಾನಗಳಿಗೆ 98 ನಾಮಪತ್ರ ಸಲ್ಲಿಕೆಯಾಗಿದ್ದು ಇದರಲ್ಲಿ 8, ತೊರೆನೂರಿನ 10 ಸ್ಥಾನಗಳಿಗೆ 42 ಸಲ್ಲಿಕೆಯಾಗಿದ್ದು, ಇದರಲ್ಲಿ 4, 7ನೇ ಹೊಸಕೋಟೆಯ 10 ಸ್ಥಾನಗಳಿಗೆ ಸಲ್ಲಿಕೆಯಾಗಿದ್ದ 41 ನಾಮಪತ್ರಗಳ ಪೈಕಿ 2, ನಾಕೂರು ಶಿರಂಗಾಲದ 8 ಸ್ಥಾನಗಳಿಗೆ 18 ಸಲ್ಲಿಕೆಯಾಗಿದ್ದು, ಇದರಲ್ಲಿ 4, ಸುಂಟಿಕೊಪ್ಪದ 20 ಸ್ಥಾನಗಳಿಗೆ ಸಲ್ಲಿಕೆಯಾಗಿದ್ದ 91 ನಾಮಪತ್ರಗಳ ಪೈಕಿ 1, ಹರದೂರಿನ 11 ಸ್ಥಾನಗಳಿಗೆ ಸಲ್ಲಿಕೆಯಾಗಿದ್ದ 46 ನಾಮಪತ್ರಗಳ ಪೈಕಿ 4 ನಾಮಪತ್ರಗಳು ತಿರಸ್ಕøತಗೊಂಡಿವೆ.
ಉಳಿದಂತೆ ಕೊಡ್ಲಿಪೇಟೆಯಲ್ಲಿ 15 ಸ್ಥಾನಗಳಿಗೆ 67, ಬ್ಯಾಡಗೊಟ್ಟದಲ್ಲಿ 9ಕ್ಕೆ 33, ಬೆಸೂರಿನಲ್ಲಿ 13ಕ್ಕೆ 56, ಶನಿವಾರಸಂತೆಯಲ್ಲಿ 10ಕ್ಕೆ 33, ದುಂಡಳ್ಳಿಯ 13ಕ್ಕೆ 51, ನಿಡ್ತದಲ್ಲಿ 13ಕ್ಕೆ 44, ದೊಡ್ಡಮಳ್ತೆಯಲ್ಲಿ 9 ಕ್ಕೆ 33, ಶಾಂತಳ್ಳಿಯಲ್ಲಿ 7ಕ್ಕೆ 24 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಕ್ರಮ ಬದ್ಧವಾಗಿವೆ.
ತೋಳೂರುಶೆಟ್ಟಳ್ಳಿಯ 8 ಸ್ಥಾನಗಳ ಪೈಕಿ 2 ಸ್ಥಾನಗಳಿಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದ ಹಿನ್ನೆಲೆ ಉಳಿದ 6 ಸ್ಥಾನಗಳಿಗೆ 17, ಬೆಟ್ಟದಳ್ಳಿಯಲ್ಲಿ 7ಕ್ಕೆ 19, ಹಾನಗಲ್ಲು ಗ್ರಾ.ಪಂ.ನಲ್ಲಿ 12ಕ್ಕೆ 32, ಬೇಳೂರಿನಲ್ಲಿ 15ಕ್ಕೆ 45, ಕಿರಗಂದೂರಿನಲ್ಲಿ 10ಕ್ಕೆ 24, ಗಣಗೂರು ಗ್ರಾ.ಪಂ.ನಲ್ಲಿ 8 ಸ್ಥಾನಗಳಿಗೆ 19 ನಾಮಪತ್ರ ಸಲ್ಲಿಕೆಯಾಗಿದೆ.
ವಾಲ್ನೂರು ತ್ಯಾಗತ್ತೂರು ಗ್ರಾ.ಪಂ.ನ 11 ಸ್ಥಾನಗಳಿಗೆ 36, ನಂಜರಾಯಪಟ್ಟಣದ 8 ಕ್ಕೆ 34, ಹೆಬ್ಬಾಲೆಯ 14 ಸ್ಥಾನಗಳಿಗೆ 60, ಶಿರಂಗಾಲದಲ್ಲಿ 9 ಸ್ಥಾನಗಳಿಗೆ 35, ಚೆಟ್ಟಳ್ಳಿ 15ಕ್ಕೆ 44, ಕೆದಕಲ್ 8ಕ್ಕೆ 21, ಕೊಡಗರಹಳ್ಳಿ 10ಕ್ಕೆ 27, ಕಂಬಿಬಾಣೆ 6ಕ್ಕೆ 18, ಗರ್ವಾಲೆ ಗ್ರಾ.ಪಂ.ನ 5 ಸ್ಥಾನಗಳಿಗೆ ಸಲ್ಲಿಕೆಯಾಗಿದ್ದ 19 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿ ಘೋಷಿಸಿದ್ದಾರೆ.
ನಾಮಪತ್ರ ವಾಪಸ್ ಪಡೆಯಲು ತಾ. 14 ಕೊನೆಯ ದಿನವಾಗಿದ್ದು, ನಂತರ ಹಳ್ಳಿ ಫೈಟ್ನಲ್ಲಿ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಸಿಗಲಿದೆ.