ಗೋಣಿಕೊಪ್ಪಲು, ಡಿ. 12: ಅಕ್ರಮವಾಗಿ ಲಾಟರಿ ಟಿಕೆಟ್‍ಗಳನ್ನು ಮಾರಾಟ ಮಾಡುತ್ತಿದ್ದ ಕೋತೂರು ಗ್ರಾಮದ ಲಕ್ಕುಂದ ಪೈಸಾರಿ ನಿವಾಸಿ ಕೆ. ವೇಣು ಎಂಬಾತನನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ. ಈತನ ಬಳಿ ಇದ್ದ 168 ಲಾಟರಿ ಟಿಕೆಟ್‍ಗಳು ಹಾಗೂ 2640 ಹಣವನ್ನು ಅಮಾನತು ಪಡಿಸಿಕೊಂಡ ಪೆÇಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಡಿವೈ.ಎಸ್.ಪಿ.ಜಯಕುಮಾರ್ ಮಾರ್ಗದರ್ಶನದಲ್ಲಿ ಎಸ್‍ಐ ಕುಮಾರ್ ಮುಂದಾಳತ್ವದಲ್ಲಿ ಎ.ಎಸ್.ಐ. ಗಣಪತಿ, ಉದಯ್, ಪ್ರಾನ್ಸಿಸ್, ಸಿಬ್ಬಂದಿಗಳಾದ ಎಂ.ಡಿ. ಮನು, ಎಂ.ಎಸ್. ರಂಜಿತ್, ಪ್ರಮೋದ್, ಸ್ವಾಮಿ, ಹಾಗೂ ವಿಶ್ವನಾಥ್ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.