ಕರಿಕೆ, ಡಿ. 12: ಕುಂದಚೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಪಟ್ಟಿ ಗ್ರಾಮದಲ್ಲಿ ಕಾಡಾನೆ ಹಿಂಡು ದಾಳಿ ಮಾಡಿ ಅಪಾರ ಪ್ರಮಾಣದ ಭತ್ತದ ಫಸಲು ತಿಂದು ನಾಶಮಾಡಿದ ಘಟನೆ ನಡೆದಿದೆ. ಅಲ್ಲಿನ ನಿವಾಸಿಗಳಾದ ದಾಯನ ಉತ್ತಪ್ಪ, ಹರ್ಷವರ್ಧನ ಸಹೋದರರು ಹಾಗೂ ಪೆÇಡನೋಳನ ಸುಧೀರ್ ಅವರಿಗೆ ಸೇರಿದ ಗದ್ದೆಯಲ್ಲಿ ಕಟಾವಿಗೆ ಬಂದ ಭತ್ತದ ಫಸಲನ್ನು ನಾಶಮಾಡಿದ್ದಲ್ಲದೆ, ಗ್ರಾಮದ ಅನೇಕ ಕಡೆ ಕಾಫಿ ತೋಟಗಳಿಗೆ ನುಗ್ಗಿ ಗಿಡಗಳನ್ನು ಮುರಿದು ಫಸಲು ನಷ್ಟಮಾಡಿವೆ. ಗ್ರಾಮಸ್ಥರು ಮನೆಯಿಂದ ಹೊರಬರಲು ಭಯಪಡುವ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಕಾಡಾನೆ ಹಿಂಡನ್ನು ಮರಳಿ ಕಾಡಿಗಟ್ಟಲು ಕ್ರಮ ವಹಿಸು ವುದಲ್ಲದೇ ನಷ್ಟ ಹೊಂದಿದ ಕೃಷಿಕರಿಗೆ ಶೀಘ್ರವಾಗಿ ಸೂಕ್ತ ಪರಿಹಾರ ಒದಗಿ ಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.