ಮಡಿಕೇರಿ, ಡಿ. 11: ಗ್ರಾಮ ಪಂಚಾಯಿತಿ ಎರಡನೇ ಹಂತದ ಚುನಾವಣೆ ಸಂಬಂಧ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಶುಕ್ರವಾರ ಅಧಿಸೂಚನೆ ಹೊರಡಿಸಿ ದ್ದಾರೆ. ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ-2020ರ ಸಂಬಂಧ ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಒಟ್ಟು 35 ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ.ನಾಮಪತ್ರಗಳನ್ನು ಸಲ್ಲಿಸಲು ತಾ. 16 ಕೊನೆಯ ದಿನವಾಗಿದೆ. ತಾ. 17 ರಂದು ನಾಮಪತ್ರ ಪರಿಶೀಲನೆ, ತಾ. 19 ರಂದು ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ತಾ. 27 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ಅವಶ್ಯವಿದ್ದರೆ ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.ವೀರಾಜಪೇಟೆ ತಾಲೂಕಿನ ಚೆಂಬೆ ಬೆಳ್ಳೂರು (12), ಬಿಟ್ಟಂಗಾಲ (15), ಬೇಟೋಳಿ (12), ಆರ್ಜಿ (10), ಕೆದಮುಳ್ಳೂರು (13),

(ಮೊದಲ ಪುಟದಿಂದ) ಕಾಕೋಟುಪರಂಬು (11), ಕದನೂರು (11), ಅಮ್ಮತ್ತಿ (9), ಕಾರ್ಮಾಡು (12), ಬಿಳುಗುಂದ (8), ಹೊಸೂರು (12), ಪಾಲಿಬೆಟ್ಟ (9), ಕಣ್ಣಂಗಾಲ (10), ಹಾಲುಗುಂದ (10), ಸಿದ್ದಾಪುರ (25), ಮಾಲ್ದಾರೆ (18), ಕಿರುಗೂರು (10), ಅರುವತ್ತೊಕ್ಲು (12), ಬಿ. ಶೆಟ್ಟಿಗೇರಿ (6), ಹಾತೂರು (20), ದೇವರಪುರ (12), ತಿತಿಮತಿ (15), ಕಾನೂರು (12), ಬಾಳೆಲೆ (13), ನಿಟ್ಟೂರು (9), ಪೊನ್ನಪ್ಪಸಂತೆ (8), ಮಾಯಮುಡಿ (15), ಶ್ರೀಮಂಗಲ (11), ನಾಲ್ಕೇರಿ (7), ಕೆ. ಬಾಡಗ (9), ಕುಟ್ಟ (16), ಟಿ. ಶೆಟ್ಟಿಗೇರಿ (16), ಬಲ್ಯಮಂಡೂರು (9), ಹುದಿಕೇರಿ (16) ಮತ್ತು ಬಿರುನಾಣಿ (11). ಒಟ್ಟು 424 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.