ಕಾಲುಗಳು ಸ್ವಾಧೀನ ಕಳೆದುಕೊಂಡು ಸಂಕಷ್ಟದ ನಡುವೆ ಬದುಕು ಸಾಗಿಸುತ್ತಿರುವ ವ್ಯಕ್ತಿಯೊಬ್ಬರು ಜೀವನೋಪಾಯಕ್ಕಾಗಿ ಅಂಗಲಾಚು ವಂತಾಗಿದೆ. ಕೋರಂಗಾಲ ಗ್ರಾಮದಲ್ಲಿ ಬರೆ ಕುಸಿದು ಪ್ರಾಣಾಪಾಯ ದಿಂದ ಪಾರಾಗಿರುವ ಕಾಳನ ಲಕ್ಷ್ಮಣ ಸೊಂಟಕ್ಕೆ ಬಿದ್ದ ಪೆಟ್ಟಿನಿಂದ ಕಳೆದ ಒಂದು ವರ್ಷದಿಂದ ತೀವ್ರ ಸಂಕಷ್ಟ ಅನುಭವಿಸುತ್ತಿ ದ್ದಾರೆ. ಎರಡೂ ಮೊಣಕಾಲಿನ ಮೇಲ್ಭಾಗ ಹಾನಿಗೊಂಡು ಕುಳಿತುಕೊಳ್ಳಲೂ ಆಗದೆ ಏಳಲೂ ಆಗದೆ ದಿನ ಕಳೆಯುವ ಪರಿಸ್ಥಿತಿ ಬಂದೊದಗಿದೆ.
ಮೊದಲು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಲಕ್ಷ್ಮಣ ಯುವ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡರು. ಈಗ ತಮ್ಮ ವೃದ್ಧ ತಾಯಿ ದೇವಕ್ಕಿ (74) ಅವರೊಂದಿಗೆ ಜೀವನ ನಡೆಸಲು ಪರದಾಡುತ್ತಿದ್ದಾರೆ. ಸರ್ಕಾರದಿಂದಾಗಲಿ ಯಾವುದೇ ಇಲಾಖೆಯಿಂದಾಗಲೀ ನೆರವು ದೊರೆತಿಲ್ಲ. ಇದೀಗ ನಾಡಿನ ಸಹೃದಯರ ನೆರವನ್ನು ಅಪೇಕ್ಷಿಸುತ್ತಾ ಲಕ್ಷ್ಮಣ ದಿನಕಳೆಯುತ್ತಿದ್ದಾರೆ.
2019ರ ಆಗಸ್ಟ್‍ನಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿಕೊಂಡಿದ್ದು, ಲಕ್ಷ್ಮಣ 3-4 ತಿಂಗಳು ಮಡಿಕೇರಿ ಮತ್ತು ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಜೀವ ಉಳಿಸಿಕೊಂಡಿದ್ದಾರೆ. ಇವರಿಗೆ ಕಣ್ಣು ಕಾಣಿಸುತ್ತಿಲ್ಲ, ಕಿವಿ ಕೇಳಿಸುತ್ತಿಲ್ಲ ಜೀವನೋಪಾಯಕ್ಕಾಗಿ ಯಾವುದೇ ಆಧಾರವಿಲ್ಲದೆ ಆಗಿದೆ. ದುರಂತದಲ್ಲಿ ಮನೆ, ಜೀವ ಕಳೆದುಕೊಂಡವರಿಗೆ ಸರ್ಕಾರದಿಂದ ಪರಿಹಾರ ದೊರಕಿದೆ. ಲಕ್ಷ್ಮಣನಿಗೆ ಮಾತ್ರ ಜೀವ ಇದ್ದು ಏನೂ ಇಲ್ಲದ ಪರಿಸ್ಥಿತಿ ಬಂದೊದಗಿದೆ. ಇದೀಗ ಇವರು ದಾನಿಗಳ ನೆರವನ್ನು ಆಶ್ರಯಿಸುತ್ತಿದ್ದಾರೆ. ನೆರವನ್ನು ನೀಡಬಯಸುವವರು ಲಕ್ಷ್ಮಣ ಅವರ ಬ್ಯಾಂಕ್ ಖಾತೆ ಸಂಖ್ಯೆ 11022250000271 iಜಿsಛಿ ಛಿoಜe sಥಿಟಿಜ0001102 ಸಿಂಡಿಕೇಟ್ ಬ್ಯಾಂಕ್, ಭಾಗಮಂಡಲ. ನೆರವು ನೀಡಬಹುದು.
-ಸುನಿಲ್ ಕುಯ್ಯಮುಡಿ.