ಮಡಿಕೇರಿ, ಡಿ. 9: ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕುಗಳ ಗ್ರಾ.ಪಂ. ಚುನಾವಣೆ ಸಂಬಂಧ ಮೂರನೇ ದಿನ ಒಟ್ಟು 357 ನಾಮಪತ್ರಗಳು ಸಲ್ಲಿಕೆಯಾಗಿವೆ. ಮಡಿಕೇರಿ ತಾಲೂಕಿನಲ್ಲಿ ಇಂದು 79 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇದುವರೆಗೂ ಒಟ್ಟು 89 ನಾಮ ಪತ್ರಗಳು ಸಲ್ಲಿಕೆಯಾದಂತಾಗಿದೆ.

ಮಡಿಕೇರಿ ತಾಲೂಕಿನಲ್ಲಿ ಗಾಳಿಬೀಡು ಗ್ರಾ.ಪಂ.ನಲ್ಲಿ 1, ಮಕ್ಕಂದೂರು 2, ಕೆ. ನಿಡುಗಣೆ 2, ಮರಗೋಡು 4, ಹೊಸ್ಕೇರಿ 2, ಕಾಂತೂರು ಮೂರ್ನಾಡು 12, ಹೊದ್ದೂರು 5, ಹಾಕತ್ತೂರು 1, ಮೇಕೇರಿ 2, ಬೆಟ್ಟಗೇರಿ 6, ಮದೆ 2, ಸಂಪಾಜೆ 4, ಚೆಂಬು 4, ಪೆರಾಜೆ 3, ಕರಿಕೆ 13, ಭಾಗಮಂಡಲ 2, ಅಯ್ಯಂಗೇರಿಯಲ್ಲಿ 3, ಬಲ್ಲಮಾವಟಿ 5, ನಾಪೋಕ್ಲು 9, ಕೊಣಂಜಗೇರಿ 2, ನರಿಯಂದಡದಲ್ಲಿ 5 ನಾಮಪತ್ರಗಳು ಸಲ್ಲಿಕೆಯಾಗಿವೆ.

ಸೋಮವಾರಪೇಟೆ: 278

ತಾಲೂಕಿನ ಕೊಡ್ಲಿಪೇಟೆ ಗ್ರಾ.ಪಂ.ನಲ್ಲಿ 18, ಬ್ಯಾಡಗೊಟ್ಟದಲ್ಲಿ 3, ಬೆಸೂರಿನಲ್ಲಿ 13, ಹಂಡ್ಲಿ ಗ್ರಾ.ಪಂ.ನಲ್ಲಿ 13, ಶನಿವಾರಸಂತೆ ಯಲ್ಲಿ 6, ದುಂಡಳ್ಳಿಯಲ್ಲಿ 11, ನಿಡ್ತದಲ್ಲಿ 3, ಆಲೂರು ಸಿದ್ದಾಪುರ ಗ್ರಾ.ಪಂ.ನಲ್ಲಿ 7 ನಾಮಪತ್ರಗಳು ಸಲ್ಲಿಸಲ್ಪಟ್ಟಿವೆ.

ದೊಡ್ಡಮಳ್ತೆ ಗ್ರಾ.ಪಂ.ನಲ್ಲಿ 8, ತೋಳೂರುಶೆಟ್ಟಳ್ಳಿಯಲ್ಲಿ 1, ಹಾನಗಲ್ಲು ಗ್ರಾ.ಪಂ.ನಲ್ಲಿ 5, ನೆಲ್ಲಿಹುದಿಕೇರಿ 6, ವಾಲ್ನೂರು ತ್ಯಾಗತ್ತೂರು ಗ್ರಾ.ಪಂ.ನಲ್ಲಿ 5, ನಂಜರಾಯಪಟ್ಟಣ 4, ಗುಡ್ಡೆಹೊಸೂರು 15, ಕೂಡಿಗೆ 18, ಕೂಡುಮಂಗಳೂರು ಗ್ರಾ.ಪಂ.ನಲ್ಲಿ 26, ಮುಳ್ಳುಸೋಗೆ 25, ಹೆಬ್ಬಾಲೆ 24, ತೊರೆನೂರು ಗ್ರಾ.ಪಂ.ನಲ್ಲಿ 25, ಶಿರಂಗಾಲ 9, ಕೆದಕಲ್ 7, ಕಂಬಿಬಾಣೆ 1, 7ನೇ ಹೊಸಕೋಟೆ 8, ನಾಕೂರು ಶಿರಂಗಾಲ 3, ಸುಂಟಿಕೊಪ್ಪ 9, ಹರದೂರು 3, ಮಾದಾಪುರ ಗ್ರಾ.ಪಂ.ನಲ್ಲಿ ಇಂದು 2 ನಾಮಪತ್ರ ಸಲ್ಲಿಕೆಯಾಗಿದೆ. ತಾ. 7 ರಂದು 17, ತಾ. 8ರಂದು 72 ಮಂದಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ಇಂದು 278 ಮಂದಿ ನಾಮಪತ್ರ ಸಲ್ಲಿಸುವ ಮೂಲಕ ಈವರೆಗೆ ಒಟ್ಟು 367 ಮಂದಿ ನಾಮಪತ್ರ ಸಲ್ಲಿಸಿದಂತಾಗಿದೆ.