ಕೂಡಿಗೆ, ಡಿ. 7: ವೀರಾಜಪೇಟೆ ತಾಲೂಕಿನ ಪೊನ್ನಂಪೇಟೆ ಸಮೀಪದ ಟಿ. ಶೆಟ್ಟಿಗೇರಿಯ ತೋಟ ವೊಂದರಲ್ಲಿ ಅಕ್ರಮವಾಗಿ ಬೀಟೆ ಮರವನ್ನು ಕಡಿದು ತರಕಾರಿ ತುಂಬಿದ ಮಿನಿ ಲಾರಿಯಲ್ಲಿ ಕುಶಾಲನಗರ ಕಡೆಗೆ ಸಾಗಾಣಿಕೆ ಮಾಡುತ್ತಿದ್ದಾಗ ಕುಶಾಲನಗರ ಗ್ರಾಮಾಂತರ ಠಾಣಾ ಪೆÇಲೀಸರು ಖಚಿತವಾದ ಮಾಹಿತಿ ಮೇರೆಗೆ ಲಾರಿಯನ್ನು ಗುಡ್ಡೆಹೊಸೂರು ಸರ್ಕಲ್‍ನಲ್ಲಿ ತಡೆದು ಓರ್ವನನ್ನು ಬಂಧಿಸಿ, ಲಾರಿಯನ್ನು ವಶಪಡಿಸಿ ಕೊಂಡಿದ್ದಾರೆ. ಉಳಿದ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
ವೀರಾಜಪೇಟೆಯ ಮಹಮ್ಮದ್ ಇನಾಯತ್ ಎಂಬಾತ ತನ್ನ ಅಶೋಕ ಲೈಲ್ಯಾಂಡ್ ಮಿನಿ ಲಾರಿ (ಕೆಎ 16 ಡಿ 2813)ಯಲ್ಲಿ ತರಕಾರಿಗಳನ್ನು ತುಂಬಿ ಅದರ ಕೆಳ ಭಾಗದಲ್ಲಿ 23 ಬೀಟಿ ನಾಟಾಗಳನ್ನು ಇಟ್ಟು ಕುಶಾಲನಗರ ಕಡೆಗೆ ಬರುತ್ತಿದ್ದಾಗ ಕುಶಾಲನಗರ ಗ್ರಾಮಾಂತರ ಪೆÇಲೀಸರು ಪತ್ತೆಹಚ್ಚಿದ್ದಾರೆ.
ಬೀಟೆ ಮರದ 23 ನಾಟಾಗಳು ಸೇರಿದಂತೆ ಮಿನಿ ಲಾರಿ ಸೇರಿ 5 ಲಕ್ಷ ಮೌಲ್ಯ ವಸ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ ಅರೋಪಿ ಮಹಮ್ಮದ್ ಇನಾಯತ್‍ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕುಶಾಲನಗರ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೆÇಲೀಸರು ಸೋಮವಾರ ಟಿ. ಶೆಟ್ಟಿಗೇರಿ ಗ್ರಾಮದ ತೋಟಕ್ಕೆ ತೆರಳಿ ಪರಿಶೀಲನೆ ನಡೆಸಿ ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.