ಮಡಿಕೇರಿ, ಡಿ. 6: ಹೆಲಿಕಾಪ್ಟರ್ ಖಾಸಗಿ ಜಾಗದಲ್ಲಿ ನಿಂತಿದ್ದು ಮಾಲೀಕರಿಂದ ‘ಎನ್.ಒ.ಸಿ' ಪಡೆಯಲಾಗಿದೆ ಎಂದು ‘ತಂಬಿ ಏವಿಯೇಷನ್' ನಿರ್ದೇಶಕ ಗೋವಿಂದ್ ನಾಯರ್ ‘ಶಕ್ತಿ'ಗೆ ಸ್ಪಷ್ಟನೆ ನೀಡಿದ್ದಾರೆ. ನಗರದ ಮೆಡಿಕಲ್ ಕಾಲೇಜು ಸಮೀಪದ ಮೈದಾನದಲ್ಲಿ ‘ತಂಬಿ ಏವಿಯೇಷನ್' ಸಂಸ್ಥೆಯ ಹೆಲಿಕಾಪ್ಟರ್ ನಿಂತಿದ್ದು ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪೆÇಲೀಸ್ ಇಲಾಖೆಗೆ ಯಾವುದೇ ಮಾಹಿತಿ ಇಲ್ಲದಿದ್ದ ಕುರಿತು ‘ಶಕ್ತಿ' ತಾ. 6 ರಂದು ವರದಿ ಮಾಡಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ಸಂಸ್ಥೆಯ ನಿರ್ದೇಶಕ ಗೋವಿಂದ್ ನಾಯರ್, ಕ್ರೆಸೆಂಟ್ ಶಾಲೆಗೆ ಸೇರಿದ ಮೈದಾನದಲ್ಲಿ ಹೆಲಿ ಕಾಪ್ಟರ್ ನಿಲ್ಲಿಸಿದ್ದು ಅವರಿಂದ ‘ಎನ್.ಒ.ಸಿ' ಪಡೆಯಲಾಗಿದೆ ಎಂದು ಕೂಡ ಮಾಹಿತಿ ನೀಡಿದ್ದಾರೆ. ನೂತನ ‘ಸಿವಿಲ್ ಏವಿಯೇಷನ್ ರೂಲ್ಸ್' ಪ್ರಕಾರ ಯಾವುದಾದರು ಜಾಗದಲ್ಲಿ ಹೆಲಿ ಕಾಪ್ಟರ್ ನಿಲ್ಲಿಸುವುದಾದರೆ ಆ ಜಾಗದ ಮಾಲೀಕರ ‘ಎನ್.ಒ.ಸಿ' ಪಡೆದು ಜಿಲ್ಲಾಡಳಿತದ ಗಮನಕ್ಕೆ ತರುವ ನಿಯಮವಿದೆ. ಜಾಗದ ಮಾಲೀಕರಿಂದ ನಿರಾಪೇಕ್ಷಣಾ ಪತ್ರ ಪಡೆದಿರುವ ಕುರಿತು ಅವರು ‘ಶಕ್ತಿ’ಗೆ ಖಾತರಿಪಡಿಸಿದರು. ಅಲ್ಲದೆ, ಜಿಲ್ಲಾಡಳಿತಕ್ಕೆ ಇ ಮೇಲ್ ಮೂಲಕ ಮಾಹಿತಿ ನೀಡಿರುವದಾಗಿ ತಿಳಿಸಿದರು.

ವಷಾರ್ಂತ್ಯದಲ್ಲಿ ಹೆಲಿ-ರೈಡ್

ವಷಾರ್ಂತ್ಯದಲ್ಲಿ ಜಿಲ್ಲೆಗೆ ಪ್ರವಾಸಿಗರ ಆಗಮನ ಹೆಚ್ಚಾಗಲಿದ್ದು ಪ್ರವಾಸಿಗರು ಸೇರಿದಂತೆ ಸ್ಥಳೀಯರಿಗೆ ‘ಕಾಪ್ಟರ್ ಟೂರ್' ವ್ಯವಸ್ಥೆ ಮಾಡುವ ಯೋಜನೆ ಇದೆ. ಇದಕ್ಕೆ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತದ ಅನುಮತಿಯೊಂದಿಗೆ ಇತರ ಕೆಲವು ಇಲಾಖೆಗಳಿಂದ ‘ಎನ್.ಒ.ಸಿ' ಪಡೆಯಬೇಕು. ಅನುಮತಿ ದೊರೆತಲ್ಲಿ ಜಿಲ್ಲೆಯ ವಿವಿಧೆಡೆಗೆ ಸೇರಿದಂತೆ ಮೈಸೂರಿಗೂ ಗ್ರಾಹಕರನ್ನು ಹೆಲಿ ಕಾಪ್ಟರ್‍ನಲ್ಲಿ ವೀಕ್ಷಣೆಗೆ ಕರೆದೊಯ್ಯುವುದಾಗಿ ಸಂಸ್ಥೆಯ ಪ್ರಮುಖ ‘ಶಕ್ತಿ'ಗೆ ತಿಳಿಸಿದ್ದಾರೆ.