ವೀರಾಜಪೇಟೆ ವರದಿ, ಡಿ. 6: ಇಲ್ಲಿನ ಕಲಾ ಭೂಮಿಯ ಕಲಾವಿದ ಸಾದೀಕ್ ಅವರು ನಡೆಸಿ ಕೊಂಡು ಬರುತಿರುವ 4ನೇ ಆವೃತಿಯ ಕಲಾ ಉತ್ಸವ ಕೊಡಗು-2020 ಲಾಂಛನವನ್ನು ಸಂಸದ ಪ್ರತಾಪ್ಸಿಂಹ ಮೈಸೂರಿನಲ್ಲಿ ಬಿಡುಗಡೆ ಗೊಳಿಸಿದರು. ತಾ. 21 ರಿಂದ 27 ರವರೆಗೆ ಆನ್ಲೈನ್ ಮೂಲಕ ತರಬೇತಿ, ಪ್ರದರ್ಶನಗಳು ವೀರಾಜಪೇಟೆಯ ಶಾನ್ಬಾಗ್ ಸಭಾಂಗಣದಲ್ಲಿ ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ನಡೆಯಲಿದೆ.