ಗುಡ್ಡೆಹೊಸೂರು, ಡಿ. 6: ಇಲ್ಲಿಗೆ ಸಮೀಪದ ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ಮುರುಳಿ ಮಾದಯ್ಯ ಅವರ ಅಧ್ಯಕ್ಷತೆಯಲ್ಲಿ ಶಾಲಾ ಆವರಣದಲ್ಲಿ ನಡೆಯಿತು. ಸಭೆಯಲ್ಲಿ ಸಂಘದ ಹಲವು ಕಾರ್ಯಕ್ರಮದ ಬಗ್ಗೆ ಆಡಳಿತ ಮಂಡಳಿ ಮತ್ತು ಸದಸ್ಯರ ನಡುವೆ ಚರ್ಚೆಗಳು ನಡೆಯಿತು. ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಧನಂಜಯ ಅವರು ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಧನಪಾಲ್, ಎ.ವಿ. ಶಾಂತಕುಮಾರ್, ಡಿ.ಎಲ್. ಮಹೇಶ್, ಪಿಬಿ. ಅಶೋಕ್, ಬಿ.ಎನ್. ಕಾಶಿ, ಕೆ.ಡಿ. ದಾದಪ್ಪ, ವಿ.ಎಸ್. ರಾಜಪ್ಪ, ಆರ್.ಕೆ. ಚಂದ್ರ, ಕೆ.ಜಿ. ಲೋಕನಾಥ್, ಹೆಚ್.ಕೆ. ಕೃಷ್ಣ, ಹೆಚ್.ಎನ್. ಕಮಲಮ್ಮ, ಎಸ್.ಬಿ. ಅನಿತಾ ಹಾಗೂ ಸಂಘದ ಸಿಬ್ಬಂದಿ ವರ್ಗದವರು ಉಪಸ್ಥಿತ ರಿದ್ದರು. ಈ ಸಂದರ್ಭ 7 ಮತ್ತು 10ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಸಂಘದ ವ್ಯಾಪ್ತಿಗೆ ಒಳಪಡುವ ಎಲ್ಲಾ ಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಮುಂದಿನ ಅವಧಿಯಲ್ಲಿ ಸಂಘದ ವತಿಯಿಂದ ನಡೆಯುವ ಹಲವು ಪ್ರಗತಿ ಕಾರ್ಯ ಕ್ರಮದ ಬಗ್ಗೆ ಮುರಳಿ ಮಾದಯ್ಯ ಅವರು ಸಭೆಯ ಗಮನಕ್ಕೆ ತಂದರು. ಅಲ್ಲದೆ ಕಳೆದ ಬಾರಿ ಸಂಸ್ಥೆ ರೂ. 33.10 ಲಕ್ಷಗಳ ಲಾಭದಲ್ಲಿ ರುವುದಾಗಿ ಸಭೆಗೆ ತಿಳಿಸಿದರು. ಮುಖ್ಯ ಕಾರ್ಯ ನಿರ್ವಣಾಧಿಕಾರಿ ಕೆ.ಟಿ. ಧನಂಜಯ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿ ಗಳಾದ ರೇಷ್ಮ, ಅಕ್ಷತಾ ಪ್ರಾರ್ಥಿಸಿದರು.