ಗೋಣಿಕೊಪ್ಪ, ಡಿ. 6: ಸಮಾಜ ಶೋಷಣೆ ಮುಕ್ತವಾದಲ್ಲಿ ಮಾತ್ರ ಸಂವಿಧಾನದ ಆಶಯ ಈಡೇರಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಂಕಲ್ಪ ಮಾಡ ಬೇಕೆಂದು ಹಿರಿಯ ವಕೀಲ, ಕಾಂಗ್ರೆಸ್ ಮುಖಂಡ ಅಜ್ಜಿಕುಟ್ಟೀರ ಪೊನ್ನಣ್ಣ ಕರೆ ನೀಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ) ವತಿಯಿಂದ ನಗರದ ಕಾಮತ್ ನವಮಿ ಸಭಾಂಗಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಆಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಶೈಕ್ಷಣಿಕವಾಗಿ ಸಾಧನೆ ಮಾಡಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿ ಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಾ.ಬಿ.ಆರ್ ಅಂಬೇಡ್ಕರ್ ಹೇಳಿರು ವಂತೆ ಶಿಕ್ಷಣ, ಸಂಘಟನೆ, ಹೋರಾಟದ ತತ್ವವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದರು.
ಗೋಣಿಕೊಪ್ಪ ಪೆÇಲೀಸ್ ಉಪನಿರೀಕ್ಷಕ ಸುಬ್ಬಯ್ಯ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ಜೀವನದಲ್ಲಿ ಅನುಭವಿಸಿದ ನೋವುಗಳನ್ನು ಮೀರಿ ಸಾಧನೆ ಮಾಡಿ ವಿಶ್ವರತ್ನ ಎಂದು ಕರೆಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ಉದ್ಯಮಿ ಕೇಶವ ಕಾಮತ್ ಮಾತನಾಡಿ, ಸೋಲನ್ನು ಸವಾಲಾಗಿ ಸ್ವೀಕರಿಸಿದರೆ ಮಾತ್ರ ಗೆಲುವು ಸಾಧ್ಯ. ಶಿಕ್ಷಕರೊಂದಿಗೆ ಉತ್ತಮ ಸಂಬಂಧ ಇದ್ದರೆ, ಗೌರವಿಸಿದರೆ ಸಾಧನೆ ಸಾಧ್ಯ ಎಂದರು.ಪತ್ರಕರ್ತ ಹೆಚ್.ಕೆ. ಜಗದೀಶ್ ಮಾತನಾಡಿ, ಅಂಬೇಡ್ಕರ್ ಆದರ್ಶ ತತ್ವಗಳನ್ನು ತಿಳಿದುಕೊಳ್ಳಬೇಕು. ಶಿಕ್ಷಣಕ್ಕೆ ವಿದ್ಯಾರ್ಥಿಗಳು ಒತ್ತು ನೀಡಬೇಕು. ಸಮಾಜದಲ್ಲಿ ಹಿಂದುಳಿದವರು ಮುಖ್ಯವಾಹಿನಿಗೆ ಬರಬೇಕು ಎಂದರು.
ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸೋಮಣ್ಣ ಮಾತನಾಡಿ, ಶಿಕ್ಷಣದ ಮೂಲಕ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬಹುದು. ಸಮಾಜದ ಬಗ್ಗೆ ಸೂಕ್ಷ್ಮತೆ, ಕಳಕಳಿ ಇರಬೇಕು. ವಿದ್ಯಾರ್ಥಿಗಳ ಸಂಕಷ್ಟ ಅರಿತು ಶಿಕ್ಷಕರು ಮಾರ್ಗದರ್ಶನ ನೀಡಬೇಕು ಎಂದರು.
ಪ್ರಾಧ್ಯಾಪಕ ಹೆಚ್.ಎಲ್. ಗಿರೀಶ್ ಮಾತನಾಡಿ, ಅಂಬೇಡ್ಕರ್ ಹಲವು ಸಂಕಷ್ಟದ ನಡುವೆ 4 ಪಿಹೆಚ್‍ಡಿ ಸೇರಿದಂತೆ ಆನೇಕ ಪದವಿಗಳನ್ನು ಪಡೆದು ಸಂದಿಗ್ಧ ಪರಿಸ್ಥಿತಿಯಲ್ಲಿ ಕೂಡ ಶ್ರಮವಹಿಸಿ ಶೈಕ್ಷಣಿಕ ಸಾಧನೆ ಮಾಡಿ ನವಭಾರತ ನಿರ್ಮಾಣ ಮಾಡಿದರು ಎಂದು ಹೇಳಿದರು.
ಸಂಘಟನೆ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಮಾತನಾಡಿ, ಸಮಾಜದಲ್ಲಿ ಮುಖ್ಯವಾಹಿನಿಗೆ ಬಾರದೆ ಹಿಂದುಳಿದಿದ್ದ ಜನಾಂಗದ ಉದ್ಧಾರಕ್ಕೆ ಸಂಘಟನೆ ರಚನೆ ಗೊಂಡಿದೆ. ಹೋರಾಟದ ಮೂಲಕ ಸಮುದಾಯದ ಅಭಿವೃದ್ಧಿ ಸಾಧ್ಯವಾಗಿದೆ. ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು ಸನ್ಮಾನ ಕಾರ್ಯಕ್ರಮವನ್ನು ಕಳೆದ 32 ವರ್ಷದಿಂದ ಆಯೋಜಿಸಿ ಪೆÇ್ರೀತ್ಸಾ ಹಿಸುವ ಕೆಲಸ ಮಾಡುತ್ತಿದ್ದೇವೆ, ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಕಾರ್ಯಾಗಾರ ವನ್ನು ಸಂಘಟನೆ ಮೂಲಕ ಆಯೋಜಿಸುತ್ತಿ ದ್ದೇವೆ ಎಂದರು.
ವಿಭಾಗೀಯ ಸಂಚಾಲಕ ವೀರಭದ್ರ, ದಸಂಸ ಮುಖಂಡ ಸತೀಶ್ ಸಿಂಗಿ, ದೀಪಕ್, ಈರಪ್ಪ, ಕುಮಾರ್, ಲೋಕೇಶ್ ಇದ್ದರು.
ಹೆಚ್.ಎಲ್. ದಿವಾಕರ್ ಸ್ವಾಗತಿಸಿ, ಗಿರೀಶ್ ಕ್ರಾಂತಿ ಗೀತೆ ಹಾಡಿದರು, ಸತೀಶ್ ಸಿಂಗಿ ನಿರೂಪಿಸಿ, ವಂದಿಸಿದರು.
ಮಡಿಕೇರಿಯಲ್ಲಿ ಆಚರಣೆ
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಅಂಬೇಡ್ಕರ್ ಪರಿನಿರ್ವಾಣ ಕಾರ್ಯ ಕ್ರಮ ನಡೆಯಿತು. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಗಣಕವಿಜ್ಞಾನ ವಿಭಾಗದ ಮುಖ್ಯಸ್ಥರಾದ ಎಂ.ಎನ್. ರವಿಶಂಕರ್, ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಂಯೋಜಕ ಡಾ. ಇ. ತಿಪ್ಪೇಸ್ವಾಮಿ ಮಾತನಾಡಿ ದರು. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಜೀವನ ಸಾಧನೆ ಕುರಿತು ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಎ.ಎನ್. ಗಾಯತ್ರಿ ವಿಚಾರ ಮಂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೇಜರ್ ಡಾ. ರಾಘವ ಅವರು, ಡಾ. ಅಂಬೇಡ್ಕರ್ ಅವರ ಹೋರಾಟ ಹಾಗೂ ಸಾಮಾಜಿಕ ಸುಧಾರಣೆಗಳ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಗಾಯತ್ರಿದೇವಿ ಉಪಸ್ಥಿತರಿದ್ದರು. ಹಿಂದಿ ವಿಭಾಗದ ಪ್ರಾಧ್ಯಾಪಕ ಡಾ. ಬಿ.ಹೆಚ್. ತಲವಾರ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಬೋಧಕೇತರರು ಭಾಗವಹಿಸಿದ್ದರು.
ಶನಿವಾರಸಂತೆಯಲ್ಲಿ
ದ.ಸಂ.ಸ ಜಿಲ್ಲಾ ಶಾಖೆ ಹಾಗೂ ಹೋಬಳಿ ಶಾಖೆ ವತಿಯಿಂದ ಡಾ. ಅಂಬೇಡ್ಕರ್ ಅವರ ಪರಿನಿರ್ವಾಣ ಅಂಗವಾಗಿ ಕೆ.ಆರ್.ಸಿ. ವೃತ್ತದಲ್ಲಿ ದ.ಸಂ.ಸ. ಜಿಲ್ಲಾ ಸಂಯೋಜಕ ಜೆ.ಆರ್. ಪಾಲಾಕ್ಷ ಅವರು ಅಂಬೇ ಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಪ್ರಾಧ್ಯಾಪಕ ಕೆ.ಪಿ. ಜಯ ಕುಮಾರ್, ವಿದ್ಯುತ್ ಇಲಾಖೆಯ ಪ್ರದೀಪ್, ದಲಿತ ಸಮಿತಿಯ ಸಣ್ಣಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ಹೋಬಳಿ ಅಧ್ಯಕ್ಷ ಶಿವುಲಿಂಗ, ಪ್ರಮುಖರಾದ ಎಸ್.ಜೆ. ರಾಜಪ್ಪ, ಎಂ.ಜೆ. ನಾಗರಾಜು ಹಾಗೂ ಇತರರು ಇದ್ದರು.