ಸುಂಟಿಕೊಪ್ಪ, ಡಿ. 6: ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳೆಯೋರ್ವರು ನೇಣಿಗೆ ಶರಣಾದ ಘಟನೆ ನಡೆದಿದೆ.ಕೆದಕಲ್ ಗ್ರಾಮ ಪಂಚಾಯಿತಿಯ 7ನೇ ಮೈಲು ನಿವಾಸಿ ಗೃಹಿಣಿ ಅಮೀನಾ (35) ಅವರೇ ನೇಣಿಗೆ ಶರಣಾದ ದುರ್ದೈವಿಯಾಗಿದ್ದಾರೆ. ವಿವಾಹಿತರಾದ ಅಮಿನಾ ಅವರನ್ನು ಗಂಡ ತೊರೆದಿದ್ದು 1 ಗಂಡು ಮಗುವಿನೊಂದಿಗೆ 7ನೇ ಮೈಲು ಶ್ರೀನಾಥ ತೋಟದ ಬಂಗಲೆಯಲ್ಲಿ ಕಾರ್ಮಿಕಳಾಗಿ ದುಡಿಯುತ್ತಿದ್ದರು. ತಾ.5 ರಂದು ಸಂಜೆ ತೋಟದ ಬಂಗಲೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.