ನಾಪೋಕ್ಲು, ಡಿ. 6: ಇಂದು ಕಕ್ಕಬ್ಬೆಯ ಮುತ್ತವ್ವ ಹಾಲ್‍ನಲ್ಲಿ ಶತಾಯುಷಿ ಕೇಟೋಳಿರ ಸೀತವ್ವ ಅವರನ್ನು ಕುಟುಂಬಸ್ಥರು ಬಂಧುಮಿತ್ರರು ಅಭಿನಂದಿಸಿ, ಗೌರವಿಸಿದರು. ಕಾರ್ಯಕ್ರಮದಲ್ಲಿ ಶತಮಾನೋತ್ಸವ ಸೀತವ್ವ ಅವರ ಮಗ ಅಪ್ಪಣ್ಣ , ಮೊಮ್ಮಗ ಕದ್ದಣಿಯಂಡ ಹರೀಶ್ ಬೋಪಣ್ಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಕುಟುಂಬದ ಪರವಾಗಿ ಕೇಟೋಳಿರ ಕುಟ್ಟಪ್ಪ ಅವರು ನೂರು ವರ್ಷ ಪೂರೈಸಿದ ಸೀತವ್ವನವರಿಗೆ ಶುಭ ಹಾರೈಸಿದರು.

-ದುಗ್ಗಳ