ಮಡಿಕೇರಿ, ಡಿ. 4: ಬಚ್ಚಲು ಮನೆಯ ಒಲೆಗೆ ಹಾಕಿದ್ದ ಬೆಂಕಿ ಮನೆಗೆ ಆವರಿಸಿಕೊಂಡು ಮನೆಯಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿ ಅದೃಷ್ಟವಶಾತ್ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.

ಡೈರಿ ಫಾರಂ ಬಳಿಯ ನಿವಾಸಿ, ಮಕ್ಬೂಲ್ ಎಂಬವರ ಮನೆಯ ಹಿಂಬದಿಯಲ್ಲಿರುವ ಒಲೆಗೆ ಹಾಕಿದ್ದ ಬೆಂಕಿ, ಒಲೆಯ ಸನಿಹ ಜೋಡಿಸಿಟ್ಟಿದ್ದ ಸೌಧೆ ಹಾಗೂ ತೆಂಗಿನ ಚಿಪ್ಪುಗಳಿಗೆ ಹೊತ್ತಿಕೊಂಡಿದೆ. ಬೆಂಕಿ ತೀವ್ರಗೊಂಡು ಮನೆಯಲ್ಲಿದ್ದ ಕಪಾಟು, ಬಟ್ಟೆಗಳಿಗೆ ಆವರಿಸಿಕೊಂಡು ಎಲ್ಲವೂ ಸುಟ್ಟು ಹೋಗಿದೆ. ಮಕ್ಬೂಲ್ ಕುಟುಂಬ ಉಟ್ಟ ಬಟ್ಟೆಯಲ್ಲೇ ಇರುವಂತಾಗಿದೆ. ಅಗ್ನಿಶಾಮಕ ದಳದ ಕಚೇರಿ ಸನಿಹದಲ್ಲೇ ಇದ್ದರೂ ಕೂಡ ಮನೆಯವರಾಗಲೀ, ಸನಿಹದವರಾಗಲೀ ವಿಷಯ ತಿಳಿಸಲೇ ಇಲ್ಲ. ಅತ್ತ ಕಡೆಯಿಂದ ಬೈಕ್‍ನಲ್ಲಿ ತೆರಳುತ್ತಿದ್ದ ಯುವಕರು ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಿದ್ದಾರೆ.

ಕೂಡಲೇ ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ದಳದ ನಂಜಪ್ಪ, ಡಿ.ಎಂ. ಅರುಣ್‍ಕುಮಾರ್, ಭರಮಪ್ಪ ಅವರುಗಳು ಬೆಂಕಿ ನಂದಿಸಿ ಹೆಚ್ಚಿನ ಅಪಾಯವನ್ನು ತಪ್ಪಿಸಿದ್ದಾರೆ.

- ಮಾಹಿತಿ : ದಶರಥ