ನಾಪೆÇೀಕ್ಲು, ಡಿ. 4: ನಾಪೆÇೀಕ್ಲುವಿನ ಬಿದ್ದಾಟಂಡ ವಾಡೆಯ ನೂರಂಬಾಡ ಮಂದ್‍ನಲ್ಲಿ ಗ್ರಾಮಸ್ಥರೆಲ್ಲರ ಸಮಾಗಮದೊಂದಿಗೆ ನಡೆದ ಸಾಂಪ್ರದಾಯಿಕ ಪುತ್ತರಿ ಕೋಲಾಟ ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಳ್ಳುವ ಹಬ್ಬದ ಸಂಭ್ರಮವನ್ನು ವಿಸ್ತರಿಸಿತು.

ನಾಪೆÇೀಕ್ಲು, ಬೇತು ಮತ್ತು ಕೋಕೇರಿ ಗ್ರಾಮಗಳನ್ನು ಒಳಗೊಂಡಂತೆ ನಡೆಯುವ ಐತಿಹಾಸಿಕ ನೂರಂಬಾಡ ಕೋಲ್ ಮಂದ್‍ನಲ್ಲಿ ಪುತ್ತರಿ ಕೋಲಾಟಕ್ಕೂ ಮುನ್ನ ಬೇತು ಮಕ್ಕಿ ಶಾಸ್ತಾವು ದೇವಾಲಯದಿಂದ ಸಂಪ್ರದಾಯದಂತೆ ತಕ್ಕ ಮುಖ್ಯಸ್ಥರು ದೇವರ ತಿರುವಾಭರಣದೊಂದಿಗೆ ಕಾಪಾಳ ಕಳಿ ವೇಷಧಾರಿಗಳು ಮತ್ತು ಕೊಂಬು ಕೊಟ್ಟ್ ವಾಲಗದೊಂದಿಗೆ ಇಂದು ಬೆಳಿಗ್ಗೆ ಮೆರವಣಿಗೆಯ ಮೂಲಕ ನೂರಂಬಾಡ ಮಂದ್‍ನತ್ತ ಹೆಜ್ಜೆ ಹಾಕಿದರು.

ಹಿಂದಿನಿಂದಲೇ ನಡೆದುಕೊಂಡು ಬಂದ ಪದ್ಧತಿಯಂತೆ ಮೆರವಣಿಗೆಯ ನಡುವೆ ಕುರುಂಬರಾಟ್ ಬನದಲ್ಲಿ ವಿಶ್ರಾಂತಿ ಪಡೆದು ಮಧ್ಯಾಹ್ನ ನೂರಂಬಾಡ ಮಂದ್‍ಗೆ ತಿರುವಾಭರಣದೊಂದಿಗೆ ಆಗಮಿಸಿದ ಗ್ರಾಮದ ತಕ್ಕಮುಖ್ಯಸ್ಥರನ್ನು ಕೊಳಕೇರಿ ಗ್ರಾಮದ ತಕ್ಕಮುಖ್ಯಸ್ಥರು ಶ್ರೀ ಮಹದೇವರ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಪೂಜೆ ಸಲ್ಲಿಸಿ ಸ್ವಾಗತಿಸಿದ ಬಳಿಕ ಹುತ್ತರಿ ಕೋಲಾಟಕ್ಕೆ ಚಾಲನೆ ದೊರಕಿತು.

ನಾದಕ್ಕೆ ತಕ್ಕಂತೆ ಮೂರು ಗ್ರಾಮದ ತಕ್ಕಮುಖ್ಯಸ್ಥರು ಗ್ರಾಮಸ್ಥರು ಮಂದ್‍ಗೆ ಪ್ರದಕ್ಷಿಣೆ ಬರುವುದರೊಂದಿಗೆ ಲಾಲಿತ್ಯ ಪೂರ್ಣವಾಗಿ ವೈವಿಧ್ಯತೆಗಳನ್ನು ಮಿಳಿತಗೊಳಿಸಿಕೊಂಡ ಕೋಲಾಟ್‍ನ ನಾದದೊಂದಿಗೆ ‘ಬಪ್ಪಕ ಪುತ್ತರಿ ಬಣ್ಣತೆ ಬಾತ್ ಪೆÇಯಿಲೆ ಪೆÇಯಿಲೆ, ಪೆÇೀಪಕ ಪುತ್ತರಿ ಎಣ್ಣತೆ ಪೆÇೀಚಿ ಪೆÇಯಿಲೆ’ ಉದ್ಘೋಷ ಮಂದ್‍ನುದ್ದಕ್ಕೂ ಪಸರಿಸಿತು.

ಗ್ರಾಮಸ್ಥರ ಉತ್ಸಾಹ, ಹರ್ಷೋದ್ಘಾರಗಳ ನಡುವೆ ನೂರಂಬಾಡ ಮಂದ್‍ನ ಹುತ್ತರಿ ಕೋಲಾಟ ಸಂಭ್ರಮವನ್ನು ನೆರೆದ ಮಂದಿ ಮನದುಂಬಿಕೊಂಡರು. ಕಾರ್ಯಕ್ರಮದಲ್ಲಿ ನಾಪೋಕ್ಲು, ಕೊಳಕೇರಿ, ಬೇತು ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು.ಈ ನಾಡ್ ಮಂದ್‍ನಲ್ಲಿ ದೊಡ್ಡ ಕೋಲು ಮತ್ತು ಸಣ್ಣ ಕೋಲು ಎರಡು ದಿನ ಕೋಲಾಟ ನಡೆಸಿ ನಂತರ ಮಕ್ಕಿ ದೇವಾಲಯದಲ್ಲಿ ಕೋಲು ಒಪ್ಪಿಸುವ ಪದ್ಧತಿ ಇರುತ್ತದೆ.