ಗೋಣಿಕೊಪ್ಪಲು, ಡಿ. 4: ಜಿಲ್ಲೆಯಲ್ಲಿ ಪ್ರಮುಖವಾಗಿ ಎದುರಾಗುತ್ತಿರುವ ಆನೆ-ಮಾನವ ಸಂಘರ್ಷಕ್ಕೆ ಸಂಬಂಧಿಸಿದಂತೆ ಅಗತ್ಯವಿದ್ದ ಕಡೆಯಲ್ಲಿ ರೈಲ್ವೆ ಬ್ಯಾರಿಕೇಡ್‍ಅನ್ನು ಅಳವಡಿಸುವ ಬಗ್ಗೆ ಅರಣ್ಯ ಸಚಿವ ಆನಂದ್‍ಸಿಂಗ್ ರೈತ ಮುಖಂಡರುಗಳಿಗೆ ಭರವಸೆ ನೀಡಿದರು. ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳನ್ನು ಭೇಟಿ ಮಾಡಿದ ಸಚಿವರು ಆನೆ ಹಾವಳಿಯ ಬಗ್ಗೆ ಚರ್ಚೆ ನಡೆಸಿದರು.
ಕಾಡಾನೆ ಹಾವಳಿಯಿಂದ ರೈತರು ಬೆಳೆದ ಫಸಲುಗಳು ಕೈ ಸೇರುವ ಮುನ್ನ ಕಾಡಾನೆಯ ಪಾಲಾಗುತ್ತಿದೆ. ಆದರೂ ರೈತರು ಶ್ರಮಪಟ್ಟು ಭತ್ತ ಕೃಷಿಯಲ್ಲಿ ತೊಡಗಿದ್ದಾರೆ. ಕೆಲವು ಭಾಗದಲ್ಲಿ ಸೋಲಾರ್ ಬೇಲಿಗಳು ಕಾರ್ಯನಿರ್ವಹಿಸುತ್ತಿಲ್ಲ. ತೂಗು ಸೋಲಾರ್ ಬೇಲಿಗಳು ಅಷ್ಟಾಗಿ ಪ್ರಯೋಜನವಾಗುತ್ತಿಲ್ಲ ಕಾಡಾನೆಯ ಹಾವಳಿಯನ್ನು ತಪ್ಪಿಸಲು ಪ್ರಮುಖವಾಗಿ ರೈಲ್ವೆ ಕಂಬಿ ಅಳವಡಿಸುವುದು ಆಗಬೇಕಾಗಿದೆ, ಬಿದಿರು ಆನೆಗಳಿಗೆ ರುಚಿಯಾದ ಆಹಾರವಾಗಿದೆ. ಇದನ್ನು ಹೆಚ್ಚಾಗಿ ನೆಡುವುದರಿಂದ ಮತ್ತಷ್ಟು ಕಾಡಾನೆಗಳು ರೈತರ ಜಮೀನಿಗೆ ನುಗ್ಗುವ ಸಾಧ್ಯತೆ ಇದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಸಚಿವರ ಗಮನ ಸೆಳೆದರು.
ರೈತ ಮುಖಂಡರುಗಳ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಆನಂದ್ ಸಿಂಗ್ ಬಿದಿರು ನೆಡುವುದರಿಂದ ಕಾಡಾನೆಗಳು ಹೆಚ್ಚಾಗಿ ನಾಡಿಗೆ ಬರುತ್ತವೆ ಎಂಬುದು ಸರಿಯಲ್ಲ. ಬಿದಿರು ನೆಡುವುದರಿಂದ ಪರಿಸರವನ್ನು ಉಳಿಸಬಹುದು ಭಾಗದಲ್ಲಿ ಸೋಲಾರ್ ಬೇಲಿಗಳು ಕಾರ್ಯನಿರ್ವಹಿಸುತ್ತಿಲ್ಲ. ತೂಗು ಸೋಲಾರ್ ಬೇಲಿಗಳು ಅಷ್ಟಾಗಿ ಪ್ರಯೋಜನವಾಗುತ್ತಿಲ್ಲ ಕಾಡಾನೆಯ ಹಾವಳಿಯನ್ನು ತಪ್ಪಿಸಲು ಪ್ರಮುಖವಾಗಿ ರೈಲ್ವೆ ಕಂಬಿ ಅಳವಡಿಸುವುದು ಆಗಬೇಕಾಗಿದೆ, ಬಿದಿರು ಆನೆಗಳಿಗೆ ರುಚಿಯಾದ ಆಹಾರವಾಗಿದೆ. ಇದನ್ನು ಹೆಚ್ಚಾಗಿ ನೆಡುವುದರಿಂದ ಮತ್ತಷ್ಟು ಕಾಡಾನೆಗಳು ರೈತರ ಜಮೀನಿಗೆ ನುಗ್ಗುವ ಸಾಧ್ಯತೆ ಇದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಸಚಿವರ ಗಮನ ಸೆಳೆದರು.
ರೈತ ಮುಖಂಡರುಗಳ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಆನಂದ್ ಸಿಂಗ್ ಬಿದಿರು ನೆಡುವುದರಿಂದ ಕಾಡಾನೆಗಳು ಹೆಚ್ಚಾಗಿ ನಾಡಿಗೆ ಬರುತ್ತವೆ ಎಂಬುದು ಸರಿಯಲ್ಲ. ಬಿದಿರು ನೆಡುವುದರಿಂದ ಪರಿಸರವನ್ನು ಉಳಿಸಬಹುದು ಆಗಮಿಸುತ್ತಿವೆ. ಇದರಿಂದ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ರೈಲ್ವೆ ಬ್ಯಾರಿಕೇಡ್ ಅಳವಡಿಸಲು 500 ಕೋಟಿ ಹಣದ ಬೇಡಿಕೆಯನ್ನು ಸಚಿವರ ಮುಂದೆ ಇಡಲಾಗಿದೆ. ಕೋವಿಡ್ ಸಮಸ್ಯೆಯಿಂದಾಗಿ ಇದು ನೆನೆಗುದಿಗೆ ಬಿದ್ದಿದೆ ಮುಂದೆ ಹಣ ಬಿಡುಗಡೆ ಮಾಡುವ ಸಂದರ್ಭ ಕೊಡಗಿಗೆ ಹೆಚ್ಚಿನ ಅನುದಾನವನ್ನು ತರುವ ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭ ಕೃಷಿ ಸಚಿವ ಬಿ.ಸಿ. ಪಾಟೀಲ್, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ಜಿಲ್ಲಾ ಖಜಾಂಚಿ ಇಟ್ಟೀರ ಸಬಿತ ಭೀಮಯ್ಯ, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪಂಡ ಪ್ರವೀಣ್, ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ಪೊನ್ನಂಪೇಟೆ ಅಧ್ಯಕ್ಷ ಚೊಟ್ಟೆಕಾಳಪಂಡ ಮನು, ವಕೀಲರಾದ ಹೇಮಚಂದ್ರ, ಮುಖಂಡರಾದ ಪುಚ್ಚಿಮಾಡ ಲಾಲ ಪೂಣಚ್ಚ, ಚೆಪ್ಪುಡೀರ ಕಿರಣ್, ಕಮಲ, ಕೊಲ್ಲೀರ ಧರ್ಮಜ, ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.
-ಹೆಚ್.ಕೆ.ಜಗದೀಶ್