ದುಶ್ಚಟಗಳಿಗೆ ದಾಸರಾಗದೆ ಸಂಸ್ಕøತಿಯನ್ನು ಉಳಿಸಿ, ಬೆಳೆಸಲು ಕರೆ
ಮಡಿಕೇರಿ ಡಿ.4 : ಯುವ ಸಮೂಹ ದುಶ್ಚಟಗಳಿಗೆ ದಾಸರಾಗದೆ ಕೊಡವ ಸಂಸ್ಕøತಿಯನ್ನು ಉಳಿಸಿ, ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಕರೆ ನೀಡಿದ್ದಾರೆ.
ಮಕ್ಕಂದೂರು ಕೊಡವ ಸಮಾಜದ ವತಿಯಿಂದ ಪುತ್ತರಿ ಊರೊರ್ಮೆ ಮತ್ತು ಕೋಲ್ ಮಂದ್ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಕೊಡವ ಸಂಸ್ಕøತಿ ಉಳಿದಿದ್ದು, ಅದನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕೆಂದರು. ಮಂದ್ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಕೊಡವ ಸಂಸ್ಕøತಿ ಉಳಿದಿದ್ದು, ಅದನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕೆಂದರು. ಉಮ್ಮೇಟ್ಟಿ ಕೋಲ್ ಮಂದ್ಗೆ ತೆರಳಿ ಸಾಂಪ್ರದಾಯಿಕವಾಗಿ ಕೋಲಾಟ ಆಡಲಾಯಿತು. ಕತ್ತಿಯಾಟ್, ಬೊಳಕಾಟ್ ಹಾಗೂ ಉಮ್ಮತ್ತಾಟ್ ಕೂಡ ನಡೆಯಿತು.
ಮಕ್ಕಂದೂರು ಕೊಡವ ಸಮಾಜದ ನೂತನ ಮಹಿಳಾ ತಂಡದ ಲಾಂಛನವನ್ನು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಹಾಗೂ ಯುವಕರ ತಂಡದ ಲಾಂಛನವನ್ನು ಎನ್.ಯು. ನಾಚಪ್ಪ ಅವರು ಬಿಡುಗಡೆ ಮಾಡಿದರು.
ಕೊಡವ ಸಮಾಜದ ಅಧ್ಯಕ್ಷ ನಾಪಂಡ ಎಂ.ಕಾಳಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಯಮಿ ಐಚೆಟ್ಟಿರ ಬೋಪಣ್ಣ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.