ಮಡಿಕೇರಿ, ಡಿ. 4: ವೀರಾಜಪೇಟೆ ತಾಲೂಕಿನ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರಕಾರಿ ವಕೀಲರ ಹುದ್ದೆಗೆ ಕಂಜಿತಂಡ ಅನಿತಾ ದೇವಯ್ಯ ಅವರು ನೇಮಕಗೊಂಡಿದ್ದಾರೆ.
ಈತನಕ ಈ ಸ್ಥಾನದಲ್ಲಿ ಕೆಲಸ ನಿರ್ವಹಿಸುತ್ತಿದ್ದ ದೇವಲಿಂಗಯ್ಯ ವಿ.ಕೆ. ಅವರ ಅಧಿಕಾರವಧಿ ಮುಕ್ತಾಯವಾಗಿದ್ದು, ಇದೀಗ ಈ ಹುದ್ದೆಗೆ ಅನಿತಾ ಅವರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ಸರಕಾರದ ಕಾನೂನು ಇಲಾಖೆಯ ಅಧೀನ ಕಾರ್ಯದರ್ಶಿ ಜಿ. ಮಂಜುಳ ಅವರು ಆದೇಶ ಹೊರಡಿಸಿದ್ದಾರೆ.