ಬಾಳೆಲೆ, ಡಿ. 3: ದೇಶದ ಆತ್ಮ ಎಂದೇ ಕರೆಸಿಕೊಳ್ಳುವ ಸಂವಿಧಾನವನ್ನು ಸಂಸತ್ತು 1949 ನ. 26 ರಂದು ಅಂಗೀಕರಿಸಿತು. ಈ ದಿನವನ್ನು ರಾಷ್ಟ್ರೀಯ ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಹೇಳಿದರು.
ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯವನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ. ಜಾತ್ಯತೀತತೆ, ಸಹೋದರತೆ, ಸಹಬಾಳ್ವೆ, ಧರ್ಮನಿರಪೇಕ್ಷತೆ ಸಂವಿಧಾನದ ಮುಖ್ಯ ಆಶಯವಾಗಿದೆ. ಇದನ್ನು ಅರಿತುಕೊಂಡು ನಡೆದರೆ ಶಾಂತಿ ಹಾಗೂ ಸಮೃದ್ಧ ಭಾರತವನ್ನು ಕಟ್ಟಲು ಸಾಧ್ಯವಾಗಲಿದೆ ಎಂದು ನುಡಿದರು.
ಪ್ರಾಂಶುಪಾಲ ಡಾ. ಜೆ. ಸೋಮಣ್ಣ, ಉಪನ್ಯಾಸಕಿ ಪ್ರತಿಭಾ ಉತ್ತಪ್ಪ, ಶಿಕ್ಷಕರಾದ ಬೆನಡಿಕ್ಟ ಫರ್ನಾಂಡೀಸ್, ಎಂ. ಜಯಣ್ಣ, ಪಿ.ಎ. ಪ್ರಭುಕುಮಾರ್, ಹೆಚ್.ಬಿ. ಮಮತಾ ಹಾಜರಿದ್ದರು. ಸಂವಿಧಾನದ ಆಶಯಕ್ಕೆ ಅನುಗುಣವಾಗಿ ನಡೆದುಕೊಳ್ಳುವ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಸಂವಿಧಾನವೇ ಈ ದೇಶದ ರಾಷ್ಟ್ರೀಯ ಗ್ರಂಥ. ಇದನ್ನು ಪ್ರತಿಯೊಬ್ಬರು ಅಧ್ಯಯನ ಮಾಡುವ ಮೂಲಕ ದೇಶದ ಕಾನೂನನ್ನು ಅರಿತುಕೊಳ್ಳಬೇಕು ಎಂದು ಆಶಿಸಿದರು.