ನಾಪೋಕ್ಲು, ಡಿ. 3: ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2019-20ರ ಸಾಲಿನಲ್ಲಿ ರೂ. 16.17 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಕಲಿಯಾಟಂಡ ವಿ. ತಮ್ಮಯ್ಯ ಬ್ಯಾಂಕ್ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದÀರು.

ಪ್ರಸಕ್ತ ಸಾಲಿನಲ್ಲಿ ಸಂಘವು ಒಟ್ಟು ರೂ. 118.17 ಲಕ್ಷ ವಾರ್ಷಿಕ ವ್ಯವಹಾರವನ್ನು ನಡೆಸಿದೆ. ಸಂಘದಲ್ಲಿ 1928 ಸದಸ್ಯರಿದ್ದು 1090 ಸದಸ್ಯರು ಸಾಲದ ವ್ಯವಹಾರದಲ್ಲಿ ಪಾಲ್ಗೊಂಡಿದ್ದಾರೆ. ಸಂಘವು ರೂ. 118.17 ಲಕ್ಷ ಬಂಡವಾಳವನ್ನು ಹೊಂದಿದ್ದು, ರೂ. 79 ಲಕ್ಷ ಪಾಲು ಬಂಡವಾಳವನ್ನು, ರೂ. 360.22 ಲಕ್ಷ ಠೇವಣಿಯನ್ನೂ, ರೂ. 32.64 ಲಕ್ಷ ಕ್ಷೇಮ ನಿಧಿಯನ್ನು ಹೊಂದಿರುತ್ತದೆ ಎಂದರು.

ಪ್ರಸಕ್ತ ಸಾಲಿಗೆ ಕೃಷಿ ಸಾಲ ರೂ. 576.09 ಲಕ್ಷ ಹಾಗೂ ಕೃಷಿಯೇತರ ಸಾಲ ರೂ. 121.33 ಲಕ್ಷ ವಿತರಿಸಲಾಗಿದೆ. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ರೂ. 570.05 ಲಕ್ಷ ಕೆಸಿಸಿ ಸಾಲವನ್ನು ಹೊಂದಿಕೊಂಡಿದ್ದು, ಶೇ. 100 ಕೆಸಿಸಿ ಸಾಲ ವಸೂಲಾತಿ ಮಾಡಲಾಗಿದೆ. ತಾ. 12 ರಂದು ಸಂಘದ ವಾರ್ಷಿಕ ಮಹಾಸಭೆಯು ಸಂಘದ ಸಭಾಂಗಣ ದಲ್ಲಿ ನಡೆಯಲಿದೆ ಎಂದು ತಿಳಿಸಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಅಲ್ಲಾರಂಡ ಎಸ್. ಅಯ್ಯಪ್ಪ, ನಿರ್ದೇಶಕ ರಾದ ಬಡಕಡ ಎಂ. ಬೆಳ್ಳಿಯಪ್ಪ, ಕಲಿಯಾಟಂಡ ಎಂ. ಬೋಪಣ್ಣ, ನಿಡುಮಂಡ ಪೂವಣ್ಣ, ಕೋಡಿಮಣಿಯಂಡ ನಾಣಯ್ಯ, ಪರದಂಡ ಪ್ರಮಿಳ, ನಂಬಂಡಮಂಡ ಬಿ. ಸುನೀತ, ಎ.ಎನ್. ಲಕ್ಷ್ಮಣ, ಕೋಲೆಯಂಡ ಅಶೋಕ್, ಕುಡಿಯರ ಕೆ. ಗಿರೀಶ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಮಂಜುಳ ಇದ್ದರು.