ಪೆರಾಜೆ, ಡಿ. 3: ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಶ್ರೀ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಸ್ಥೆಯ ಅಭಿವೃದ್ಧಿಯಲ್ಲಿ ಸದಸ್ಯರ ಪೂರ್ಣ ಸಹಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತಾ, ಸಂಘದ ಮುಂದಿನ ಕಾರ್ಯಯೋಜನೆಗಳ ಬಗ್ಗೆ ವಿವರವಿತ್ತರು. ಅಡಿಕೆ ಹಳದಿ ರೋಗದ ಹಿನ್ನೆಲೆ ಸದಸ್ಯರು ಸಮಗ್ರ ಬೆಳೆ ಬೆಳೆಯುವಲ್ಲಿ ಸಂಸ್ಥೆಯ ವತಿಯಿಂದ ಮಾಹಿತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಿದ್ದೇವೆ. ಮಣ್ಣು ಪರೀಕ್ಷೆ ಮಾಡುವ ಮುಖಾಂತರ ಸರಿಯಾದ ಪ್ರಮಾಣದಲ್ಲಿ ಗೊಬ್ಬರ ನೀಡಿ ಮಣ್ಣಿನ ಫಲವತ್ತತೆ ಕಾಪಾಡುವಲ್ಲಿ ಸದÀಸ್ಯರು ಒತ್ತು ನೀಡಬೇಕು. ಮಣ್ಣು ಪರೀಕ್ಷೆ ಮಾಡಿ ಅರ್ಜಿ ನೀಡಿದ್ದಲ್ಲಿ ಶೇ. 50 ಸಹಾಯ ಧನವನ್ನು ಸಂಸ್ಥೆಯ ಮುಖಾಂತರ ಭರಿಸುವ ಬಗ್ಗೆ ಸಭೆಯಲ್ಲಿ ತಿಳಿಸಿದರು. ಸಂಘವು ವರದಿ ಸಾಲಿನಲ್ಲಿ ರೂ. 15.13 ಲಕ್ಷ ಲಾಭವನ್ನು ಹೊಂದಿದ್ದು, ಸದಸ್ಯರಿಗೆ ಶೇ. 4 ರಷ್ಟು ಡಿವಿಡೆಂಡ್ ನೀಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಲೋಕನಾಥ್ ಅಮಚೂರು, ತೇಜಪ್ರಸಾದ್ ಅಮಚೂರು, ಹೊನ್ನಪ್ಪ ಕೊಳಂಗಾಯ, ಹೊನ್ನಪ್ಪ ಅಮಚೂರು, ಆನಂದ ಆರ್.ಡಿ., ನಂಜಪ್ಪ ನಿಡ್ಯಮಲೆ, ಕೆ.ಬಿ. ಚಂದ್ರಶೇಖರ, ಧನಂಜಯ ಕೋಡಿ, ಪುಂಡರೀಕ ಹೊದ್ದೆಟ್ಟಿ ಮತ್ತಿತರ ಸದಸ್ಯರು ಸಲಹೆ ಸೂಚನೆಗಳಿತ್ತು ಸಂಸ್ಥೆಯ ಪ್ರಗತಿಯನ್ನು ಶ್ಲಾಘಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ಮೋನಪ್ಪ ಎನ್.ಬಿ., ನಿರ್ದೇಶಕರುಗಳಾದ ಅಶೋಕ ಪಿ.ಎಂ., ಪ್ರಸನ್ನ ನೆಕ್ಕಿಲ, ಗಾಂಧೀಪ್ರಸಾದ್ ಬಂಗಾರಕೋಡಿ, ದೀನರಾಜ ದೊಡ್ಡಡ್ಕ, ಜಯರಾಮ ಪಿ.ಟಿ., ಶೇಷಪ್ಪ ನಾಯ್ಕ ನಿಡ್ಯಮಲೆ, ಪ್ರಮೀಳಾ ಎನ್. ಬಂಗಾರಕೋಡಿ, ರೇಣುಕಾ ಕುಂದಲ್ಪಾಡಿ, ಉದಯಕುಮಾರ ಪಿ.ಎ., ದಾಸಪ್ಪ ಮಡಿವಾಳ ಮತ್ತು ಕಿರಣ ಬಂಗಾರಕೋಡಿಯವರು ಉಪಸ್ಥಿತರಿದ್ದರು. ವಿಶ್ವದೀಪ್ ಕುಂದಲ್ಪಾಡಿ ಪ್ರಾರ್ಥಿಸಿದರು, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಹೆಚ್.ಕೆ. ಸ್ವಾಗತಿಸಿದರು. ನಿರ್ದೇಶಕಿ ಪ್ರಮೀಳ ಎನ್. ಬಂಗಾರಕೋಡಿ ವಂದಿಸಿದರು.