ಗೋಣಿಕೊಪ್ಪಲು, ಡಿ. 3: ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಇದರ ಹಿಂದೆ ಯಾವ ಮಾಫಿಯಾ ಇದೆ ಎಂದು ತಿಳಿಯಲು ಸಾಧ್ಯವಾಗುತ್ತಿಲ್ಲ. ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವ ಮೂಲಕ ರೈತನು ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಕೊಡಗು ಜಿಲ್ಲೆ ರಾಷ್ಟ್ರಕ್ಕೆ ವಿಶೇಷ ಕೊಡುಗೆ ನೀಡಿದೆ. ಮುಂದಿನ ಪೀಳಿಗೆಗೆ ಇಲ್ಲಿಯ ಸಂಸ್ಕøತಿಯನ್ನು ನಾವುಗಳು ನೀಡಬೇಕಾಗಿದೆ ಎಂದು ಅರಣ್ಯ ಇಲಾಖೆ ಸಚಿವ ಆನಂದ್ ಸಿಂಗ್ ಹೇಳಿದರು.ಸಸ್ಯ ಪಾಲನೆ ಕ್ಷೇತ್ರ ಉದ್ಘಾಟನೆ ಮಾಡಿ ಮಾತನಾಡಿದ ಸಚಿವರು, ಕೆಲವೇ ಪ್ರದೇಶಗಳಲ್ಲಿ ಬಿದಿರುಗಳನ್ನು ಬೆಳೆಸಲು ಸಾಧ್ಯವಾಗಿದೆ. ಬಿದಿರು ಬೆಳೆಯಿಂದ ಆನೆ ಹಾವಳಿ ಹೆಚ್ಚಾಗುತ್ತವೆ ಎಂಬ ಕೊಡಗಿನ ರೈತರ ಅಹವಾಲನ್ನು ಸ್ವೀಕರಿಸಿದ್ದೇನೆ. ಆನೆ ಹಾವಳಿ ನಿಯಂತ್ರಣದ ಬಗ್ಗೆ ಹಲವು ಕಾರ್ಯ ಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಯಾವುದೇ ಪಕ್ಷ ಬರಲಿ ಅಧಿಕಾರ ನಡೆಸಲಿ ರೈತರಿಗೆ ಮಾತ್ರ ನ್ಯಾಯ ಸಿಗುವ ರೀತಿಯಲ್ಲಿ ಕೆಲಸ ಮಾಡಬೇಕು. ಅರಣ್ಯದಂಚಿನಲ್ಲಿ, ಹಾಡಿಗಳಲ್ಲಿ ವಾಸ ಮಾಡುತ್ತಿರುವ ಜನರು ಅರಣ್ಯ ರಕ್ಷಕರು ಇವರೊಂದಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಉತ್ತಮ ಬಾಂಧವ್ಯಗಳನ್ನು ವೃದ್ಧಿಸಿಕೊಳ್ಳಬೇಕು. ಸಸ್ಯ ಪಾಲನೆ ಕ್ಷೇತ್ರ ಉದ್ಘಾಟನೆ ಮಾಡಿ ಮಾತನಾಡಿದ ಸಚಿವರು, ಕೆಲವೇ ಪ್ರದೇಶಗಳಲ್ಲಿ ಬಿದಿರುಗಳನ್ನು ಬೆಳೆಸಲು ಸಾಧ್ಯವಾಗಿದೆ. ಬಿದಿರು ಬೆಳೆಯಿಂದ ಆನೆ ಹಾವಳಿ ಹೆಚ್ಚಾಗುತ್ತವೆ ಎಂಬ ಕೊಡಗಿನ ರೈತರ ಅಹವಾಲನ್ನು ಸ್ವೀಕರಿಸಿದ್ದೇನೆ. ಆನೆ ಹಾವಳಿ ನಿಯಂತ್ರಣದ ಬಗ್ಗೆ ಹಲವು ಕಾರ್ಯ ಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಯಾವುದೇ ಪಕ್ಷ ಬರಲಿ ಅಧಿಕಾರ ನಡೆಸಲಿ ರೈತರಿಗೆ ಮಾತ್ರ ನ್ಯಾಯ ಸಿಗುವ ರೀತಿಯಲ್ಲಿ ಕೆಲಸ ಮಾಡಬೇಕು. ಅರಣ್ಯದಂಚಿನಲ್ಲಿ, ಹಾಡಿಗಳಲ್ಲಿ ವಾಸ ಮಾಡುತ್ತಿರುವ ಜನರು ಅರಣ್ಯ ರಕ್ಷಕರು ಇವರೊಂದಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಉತ್ತಮ ಬಾಂಧವ್ಯಗಳನ್ನು ವೃದ್ಧಿಸಿಕೊಳ್ಳಬೇಕು.

ನಿವಾಸಿಗಳು ಅರಣ್ಯ ಬೆಳೆಸಲು ಅಪಾರ ಕೊಡುಗೆ ನೀಡಿದ್ದಾರೆ. ಅರಣ್ಯ ಅಧಿಕಾರಿಗಳು ಎಲ್ಲರಿಗೂ ಮಾದರಿ ಯಾಗಬೇಕು. ಅಧಿಕಾರ ಚಲಾಯಿ ಸುವುದೇ ಉದ್ದೇಶವಾಗಬಾರದು ಇದರಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದ ಸಚಿವರು, ಕೊಡಗು ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ ತಡೆಗಟ್ಟಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾ ಗಿದೆ. ಆದರೆ, ಕೊರೊನಾದಿಂದಾಗಿ ಕಾರ್ಯಕ್ರಮಗಳನ್ನು ಸರಿಯಾದ ಸಮಯದಲ್ಲಿ ನಡೆಸಲು ಸಾಧ್ಯವಾಗಿಲ;್ಲ ಮುಂದೆ ಎಲ್ಲವೂ ಸರಿಯಾಗುವ ಭರವಸೆ ಇದೆ ಎಂದರು.

ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಇಲ್ಲಿಯ ಕಾರ್ಯಕ್ರಮ ವನ್ನು ಅದ್ಧೂರಿಯಾಗಿ ಮಾಡುವ ಚಿಂತನೆ ಮಾಡಲಾಗಿತ್ತು. ಇದೀಗ ಚುನಾವಣೆ ಘೋಷಣೆ ಆಗಿರುವುದ ರಿಂದ ನೀತಿ ಸಂಹಿತೆಯನ್ನು ಕಾಪಾಡಿಕೊಂಡು ಸೀಮಿತವಾಗಿ ಕಾರ್ಯಕ್ರಮ ಮಾಡಬೇಕಾಗಿದೆ. ಮಾನವ-ಕಾಡು ಪ್ರಾಣಿಗಳ ಸಮಸ್ಯೆಯನ್ನು ತಡೆಗಟ್ಟಲು ಸರ್ಕಾರ ಕಟಿಬದ್ಧವಾಗಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಕುಲಪತಿ ಬಿ.ವಿ. ನಾಯಕ್, ಕಾರ್ಯಕ್ರಮದಲ್ಲಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ರಾಜ್ ಕುಮಾರ್ ಶ್ರೀವಾಸ್ತವ್, ಸೇರಿದಂತೆ ಇನ್ನಿತರ ಗಣ್ಯರು ಹಾಜರಿದ್ದರು. ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಸಿ.ಜಿ. ಕುಶಾಲಪ್ಪ ಸ್ವಾಗತಿಸಿದರು. ಡಾ. ರಾಮಕೃಷ್ಣ ಹೆಗ್ಗಡೆ ಬಿದಿರು ಸಂಪನ್ಮೂಲ ಕೇಂದ್ರದ ಕಿರು ಪರಿಚಯ ನೀಡಿದರು. ವಿದ್ಯಾ ಜಗದೀಶ್ ಪ್ರಾರ್ಥಿಸಿ, ರಾಷ್ಟ್ರಗೀತೆ ಹಾಡಿದರು.

ಕಾಲೇಜು ಆವರಣದಲ್ಲಿ ಬಿದಿರಿನಿಂದ ನಿರ್ಮಿಸಿರುವ ಬೃಹತ್ ಕೊಠಡಿಯನ್ನು ವೀಕ್ಷಿಸಲು ಸಾರ್ವಜನಿಕರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಬಿದಿರಿನಿಂದ ತಯಾರಿಸ ಬಹುದಾದ ಸಾಮಗ್ರಿಗಳ ಪ್ರಾತ್ಯಕ್ಷಿಕೆಗಳನ್ನು ಅಧಿಕಾರಿಗಳ ವರ್ಗದವರು ನೀಡಿದರು. ಸಂಘ-ಸಂಸ್ಥೆಯ ಪದಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಅರಣ್ಯ ಇಲಾಖೆಯ ಹಿರಿಯ, ಕಿರಿಯ ಅಧಿಕಾರಿಗಳು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭ ಸಚಿವದ್ವಯರನ್ನು ಸಾಂಪ್ರದಾಯಿಕ ಒಡಿಕತ್ತಿ ನೀಡಿ ಗೌರವಿಸಲಾಯಿತು.

-ಹೆಚ್.ಕೆ. ಜಗದೀಶ್, ಚನ್ನನಾಯಕ