ವೀರಾಜಪೇಟೆ ವರದಿ, ಡಿ. 3: ಮದ್ಯ ವ್ಯಸನಿಯಾಗಿದ್ದ ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ವೀರಾಜಪೇಟೆ ಪೆರುಂಬಾಡಿ ಗ್ರಾಮದಲ್ಲಿ ನಡೆದಿದೆ. ಪೆರುಂಬಾಡಿ ಗ್ರಾಮದ ನಿವಾಸಿ ಹೆಚ್.ಟಿ. ಸನ್ನಿ (70) ಮರಣಹೊಂದಿದ್ದ ವ್ಯಕ್ತಿ. ವೃತ್ತಿಯಲ್ಲಿ ಕೂಲಿ ಕಾರ್ಮಿಕನಾಗಿದ್ದು ದಿನಂಪ್ರತಿ ಮದ್ಯಸೇವನೆ ಮಾಡುವ ಚಟವಿದ್ದ ಸನ್ನಿ ತಾ. 30 ರಂದು ಹುತ್ತರಿ ಹಬ್ಬಕ್ಕೆ ಆಶ್ರಯ ಕಾಲೋನಿಯ ತನ್ನ ಮಗಳಾದ ಹೆಚ್.ಎಸ್. ನೀಲಮ್ಮ ಮನೆಗೆ ಆಗಮಿಸಿ ಕಂಠಪೂರ್ತಿ ಮದ್ಯ ಸೇವನೆ ಮಾಡಿ ಮನೆಯಿಂದ ತೆರಳಿದ್ದು, ಪೆರುಂಬಾಡಿ ಪೆÇಲೀಸ್ ತಪಾಸಣೆ ಕೇಂದ್ರದ ಬಳಿಯ ಬಸ್ಸು ತಂಗುದಾಣದಲ್ಲಿ ಸಾವನ್ನಪ್ಪಿದ್ದಾನೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಹಾಗೂ ಮೃತನ ಮಗಳು ನೀಡಿದ ದೂರಿನ ಆಧಾರದ ಮೇಲೆ ವೀರಾಜಪೇಟೆ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.