ಗೋಣಿಕೊಪ್ಪ ವರದಿ, ಡಿ. 3: ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್, ಹಾಕಿ ಕರ್ನಾಟಕ, ಹಾಕಿ ಕೂರ್ಗ್ ಸಹಯೋಗದಲ್ಲಿ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಗುರುವಾರದಿಂದ ಮತ್ತೊಂದು ಫೈವ್ ಎ ಸೈಡ್ ಹಾಕಿ ಪಂದ್ಯಾವಳಿ ಪ್ರಾರಂಭಗೊಂಡಿದೆ. ವಿವಿಧೆಡೆಯ ಹಲವು ತಂಡಗಳು ಇದರಲ್ಲಿ ಪಾಲ್ಗೊಂಡಿದ್ದು, ರೋಚಕ ಆಟ ಪ್ರದರ್ಶನಗೊಂಡಿತು. ಕೊಡಗು ಸೇರಿ ಇತರೆಡೆಯ ತಂಡಗಳು ಪ್ರಶಸ್ತಿಗೆ ಸೆಣೆಸಲಿವೆ.ಎಎಸ್‍ಸಿ ತಂಡಕ್ಕೆ ನಾರ್ತ್ ಕೂರ್ಗ್ ವಿರುದ್ಧ 9-2 ಗೋಲುಗಳ ಜಯ ದೊರೆಯಿತು. ಎಎಸ್‍ಸಿ ತಂಡದ ಧನುಶ್ 5, ಗೌತಮ್ 4, ನಾರ್ತ್‍ಕೂರ್ಗ್ ತಂಡದ ಸುಬ್ಬಯ್ಯ, ಹರ್ಷ ಗೋಲು ಹೊಡೆದರು.ಡಾಲ್ಪೀನ್ಸ್ ತಂಡವು ಮಾರ್ನಿಂಗ್ ಬಾಯ್ಸ್ ತಂಡವನ್ನು 5-3 ಗೋಲುಗಳಿಂದ ಮಣಿಸಿತು. ಡಾಲ್ಪಿನ್ಸ್ ಪರ ಶಮಂತ್ 3, ಪೊನ್ನಣ್ಣ, ಕುಮಾರ್, ಬಾಯ್ಸ್ ಪರ ಅಚ್ಚಯ್ಯ, ಬೆಳ್ಯಪ್ಪ 2 ಗೋಲು ಹೊಡೆದರು.ಹಾತೂರು ತಂಡವು ವಾರಿಯರ್ಸ್ ವಿರುದ್ಧ 4-1 ಗೋಲುಗಳ ಜಯ ಪಡೆಯಿತು. ಹಾತೂರು ಪರ ಪ್ರಧಾನ್ ಸೋಮಣ್ಣ, ಪ್ರತ್ವಿರಾಜ್ ತಲಾ 2, ವಾರಿಯರ್ಸ್ ಪರ ಕವನ್ ಕಾರ್ಯಪ್ಪ ಗೋಲು ಬಾರಿಸಿದರು.ಬೊಟ್ಯತ್ನಾಡ್ ಜೂಮರ್ಸ್ ತಂಡವನ್ನು 5-3 ಗೋಲುಗಳಿಂದ ಸೋಲಿಸಿತು. ಬೊಟ್ಯತ್ನಾಡ್ ಪರ ನಿತಿನ್ ತಿಮ್ಮಯ್ಯ, ರಂಜನ್ ಅಯ್ಯಪ್ಪ ತಲಾ 2 ಗೋಲು, ಜೂಮರ್ಸ್ ಪರ ನವೀನ್ ನಾಚಪ್ಪ 2, ನಹಿಮುದ್ದೀನ್ 1 ಗೋಲು ಹೊಡೆದರು.

ಎಸ್‍ಆರ್‍ಸಿ ತಂಡಕ್ಕೆ ಟೀಮ್ ಫ್ರಾಸ್ಟ್ ವಿರುದ್ಧ 8-7 ಗೋಲುಗಳ ಗೆಲುವು ದೊರೆಯಿತು. ಎಸ್‍ಆರ್‍ಸಿ ಪರವಾಗಿ ನಿತಿನ್ 4, ಯಶ್ವಂತ್ 2, ರಕ್ಷಿತ್, ದೀಕ್ಷಿತ್, ಫ್ರಾಸ್ಟ್ ಪರ ಉತ್ತಪ್ಪ 4, ಪೂವಯ್ಯ 2,

(ಮೊದಲ ಪುಟದಿಂದ) ಯಶ್ವಂತ್ ಗೋಲು ಹೊಡೆದರು. ಎಸ್.ಡಬ್ಲ್ಯೂಆರ್ ಹುಬ್ಬಳಿ ತಂಡವು ನಾರ್ತ್ ಕೂರ್ಗ್ ತಂಡವನ್ನು 10-1 ಗೋಲುಗಳಿಂದ ಮಣಿಸಿತು. ಹುಬ್ಬಳ್ಳಿ ಪರ ವೀರಣ್ಣ 5, ವಿನೀತ್ 2, ಸೋಮಣ್ಣ, ಸಂಜಯ್, ಬ್ರಿಜೇಶ್, ಕೂರ್ಗ್ ಪರ ಹರ್ಷ ಗೋಲು ಬಾರಿಸಿದರು.

ಅಮ್ಮತ್ತಿ ತಂಡ ಪೊದ್ದಮಾನಿ ಯನ್ನು 7-1 ಗೋಲುಗಳಿಂದ ಮಣಿಸಿತು. ಅಮ್ಮತ್ತಿ ಪರ ಗೌತಮ್ 6, ಧನುಷ್ 1, ಪೊದ್ದಮಾನಿ ಪರ ಪೊನ್ನಣ್ಣ 1 ಗೋಲು ಹೊಡೆದರು.

ನೀಲಿಯತ್‍ಗೆ ಆರ್ವಿ ಅಕಾಡೆಮಿ ವಿರುದ್ಧ 8-3 ಗೋಲುಗಳ ಜಯ ದೊರೆಯಿತು. ನೀಲಿಯತ್ ಪರ ಲೆಹರ್, ರಾಯಲ್ ಅಯ್ಯಣ್ಣ ತಲಾ 3 ಗೋಲು, ಪ್ರಜ್ವಲ್, ನಾಚಪ್ಪ, ಆರ್ವಿ ಪರ ಅರುಣ್ 2, ವಿಜಯ್ 1 ಗೋಲು ಹೊಡೆದು ಮಿಂಚಿದರು.

ಬೊಟ್ಯತ್ನಾಡ್ ತಂಡವು ಮೊದಲ ಪಂದ್ಯದಲ್ಲಿ ಎಸ್‍ಆರ್‍ಸಿ ವಿರುದ್ಧ 13 ಗೋಲು ಹೊಡೆದು ಮಿಂಚು ಹರಿಸಿತು. ಬೊಟ್ಯತ್ನಾಡ್ ತಂಡದ ರಜನ್ ಅಯ್ಯಪ್ಪ, ಮೊಣ್ಣಪ್ಪ, ಅಯ್ಯಪ್ಪ, ನಿತಿನ್ ತಿಮ್ಮಯ್ಯ ತಲಾ 3 ಗೋಲು ಸಿಡಿಸಿದರು. ಅಂಜನ್ ಯಾದವ್, ಎಸ್‍ಆರ್‍ಸಿ ತಂಡದ ದೀಕ್ಷಿತ್ 1 ಗೋಲು ಹೊಡೆದರು.

ಕಿರುಗೂರು ತಂಡವು ಆರ್ವಿ ಅಕಾಡೆಮಿಯನ್ನು 8-5 ಗೋಲುಗಳಿಂದ ಸೋಲಿಸಿತು. ಕಿರುಗೂರು ಪರ ಕಾರ್ಲ್ ಕಾರ್ಯಪ್ಪ 4, ಜತನ್ 2, ಅಪ್ಪಣ್ಣ, ಸೋಮಣ್ಣ, ಆರ್ವಿ ಪರ ಸುನಿಲ್ 2, ಅರುಣ್, ವಿಜಯ್, ಪ್ರಭಾಕರನ್ ತಲಾ ಒಂದೊಂದು ಗೋಲು ಹೊಡೆದರು.

ನೀಲಿಯತ್ ತಂಡ ಅಂಜಿಕೇರಿ ವಿರುದ್ದ 2-1 ಗೋಲುಗಳ ಜಯ ಪಡೆಯಿತು. ನೀಲಿಯತ್ ಪರ ಒರಜ್ವಲ್, ಸುಜನ್, ಅಂಜಿಕೇರಿ ತಂಡದ ಸೋಮಣ್ಣ ಗೋಲು ಹೊಡೆದರು.

ಹಾತೂರು ತಂಡವು ಬ್ಲೂಸ್ಟಾರ್ ತಂಡವನ್ನು 8-3 ಗೋಲುಗಳಿಂದ ಮಣಿಸಿತು. ಹಾತೂರು ಪರ ಪ್ರತ್ವಿರಾಜ್ 3, ಸೋಮಯ್ಯ 2, ಕುಶ 2, ಪ್ರಧಾನ್ ಸೋಮಣ್ಣ, ಬ್ಲೂಸ್ಟಾರ್ ತಂಡದ ಹುಮೈಜ್ 2, ವಿಶ್ವಾಸ್ 1 ಗೋಲು ಹೊಡೆದರು.

ಜೂಮರ್ಸ್‍ಗೆ ಟೀಮ್ ಫ್ರಾಸ್ಟ್ ವಿರುದ್ಧ 7-3 ಗೋಲುಗಳ ಗೆಲುವು ದಕ್ಕಿತು. ಜೂಮರ್ಸ್ ತಂಡದ ನವೀನ್ 5, ವೀರಾ, ಪ್ರತಿಕ್ ಫ್ರಾಸ್ಟ್ ತಂಡದ ಪೂವಯ್ಯ 2, ಉತ್ತಪ್ಪ, ದೇವಯ್ಯ ಒಂದೊಂದು ಗೋಲು ಹೊಡೆದರು.

ಟೀಮ್ ಎಸ್‍ಡಬ್ಲ್ಯೂಆರ್ ತಂಡ ಪೊದ್ದಮಾನಿಯನ್ನು 9-2 ಗೋಲುಗಳಿಂದ ಸೋಲಿಸಿತು. ವಿಜೇತ ತಂಡದ ವೀರಣ್ಣ 4, ಸೋಮಣ್ಣ 2, ವಿನಿತ್, ವಿವೇಕ್, ಬ್ರಿಜೇಶ್, ಪೊದ್ದಮಾನಿ ತಂಡದ ಅರುನ್, ಬ್ರಿಜೇಶ್ ಗೋಲು ಬಾರಿಸಿದರು.

ತಾ. 4 ರಂದು (ಇಂದು) ಬೇರಳಿನಾಡ್-ಹುಬ್ಬಳ್ಳಿ ಅಕಾಡೆಮಿ, ಬಿಬಿಸಿ-ಮಾವೆನ್ಸ್, ಎಚ್.ಆರ್‍ಸಿ-ರೈಸಿಂಗ್ ಸ್ಟಾರ್ಸ್, ಮಾರ್ನಿಂಗ್ ಬಾಯ್ಸ್-ಗುಡೂರ್ ಹಾಕಿ, ಎಸ್‍ಡಬ್ಲ್ಯೂಆರ್-ಎಎಸ್‍ಸಿ, ಪೊದ್ದಮಾನಿ-ನಾರ್ತ್‍ಕೂರ್ಗ್, ಬೊಟ್ಯತ್ನಾಡ್-ಟೀಂ ಫ್ರಾಸ್ಟ್, ನೀಲಿಯತ್,-ಕಿರುಗೂರು, ಆರ್ವಿ- ಅಂಜಿಕೇರಿನಾಡ್, ಯುಎಸ್‍ಸಿ-ಯುಟಿಎಸ್‍ಸಿ, ಬಿಬಿಸಿ-ಡೈನಮೈಟ್ಸ್, ಎಚ್‍ಆರ್ಸಿ-ಪತ್ತಿರಿಯದ್, ಎಸ್‍ಆರ್‍ಸಿ - ಜೂಮರ್ಸ್, ಗುಡೂರ್-ಡಾಲ್ಫಿನ್ಸ್, ಯುಟಿಎಸ್‍ಸಿ- ಹುಬ್ಬಳ್ಳಿ ಅಕಾಡೆಮಿ, ಮಾವೆನ್ಸ್- ಡೈನಮೈಟ್ಸ್, ಪತಿರಿಯದ್-ರೈಸಿಂಗ್ ಸ್ಟಾರ್ಸ್ ನಡುವೆ ಪಂದ್ಯಗಳು ಜರುಗಲಿವೆ.