ವೀರಾಜಪೇಟೆ ವರದಿ, ಡಿ.1; ಅಕ್ರಮವಾಗಿ ಲಾಟರಿ ಮಾರುತ್ತಿದ್ದ ಹೊಟೇಲ್ ಮಾಲೀಕನ ಬಂಧನವಾದ ಘಟನೆ ನಗರದಲ್ಲಿ ನಡೆದಿದೆ.ಪೆರುಂಬಾಡಿ ಗ್ರಾಮದ ಕೆ.ಎ.ಲತೀಫ್ ಎಂಬಾತ ಅಕ್ರಮವಾಗಿ ಕೇರಳ ರಾಜ್ಯದ ಲಾಟರಿಯನ್ನು ವೀರಾಜಪೇಟೆ ನಗರದ ಮಾಂಸ ಮಾರುಕಟ್ಟೆ ಬಳಿಯ ತನ್ನ ಹೊಟೇಲ್‍ನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಆಧರಿಸಿ ನಗರದ ಪೆÇಲೀಸರು ಬಂಧಿಸಿದ್ದಾರೆ. ಕೇರಳ ರಾಜ್ಯದ ವಿನ್ ವಿನ್ ಹೆಸರಿನ 2400 ರೂ. ಮೌಲ್ಯದ 60 ಲಾಟರಿಯನ್ನು 1800 ರೂ. ನಗದು ವಶಪಡಿಸಿಕೊಂಡಿದ್ದಾರೆ.ವೃತ್ತ ನೀರಿಕ್ಷಕ ಕ್ಯಾತೆಗೌಡ ನಿರ್ದೇಶನದಲ್ಲಿ ನಗರ ಪಿ.ಎಸ್.ಐ. ಗಳಾದ ಜಗದೀಶ್ ಧೂಳ ಶೆಟ್ಟಿ ಮತ್ತು ಬೋಜಪ್ಪ ಸಿಬ್ಬಂದಿಗಳಾದ ಎನ್.ಎಸ್ ಲೊಕೇಶ್, ಗಿರೀಶ್ ಮುಸ್ತಾಫಾ ಮತ್ತು ಚಾಲಕ ಪೂವಯ್ಯ ಕಾರ್ಯಾ ಚರಣೆಯಲ್ಲಿ ಭಾಗವಹಿಸಿದ್ದರು