ಸೋಮವಾರಪೇಟೆ,ಡಿ.1: ಕಳೆದ 15 ದಿನಗಳ ಹಿಂದೆ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಪಟ್ಟಣ ಪೆÇಲೀಸರು ಯಶಸ್ವಿಯಾಗಿದ್ದು, ಕಳುವಾಗಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪಟ್ಟಣ ಸಮೀಪದ ವಳಗುಂದ ನಿವಾಸಿ ರಮೇಶ್ ಎಂಬವರ ಮನೆಯಿಂದ ಕಳೆದ 15 ದಿನಗಳ ಹಿಂದೆ ಮರ ಕುಯ್ಯುವ ಯಂತ್ರ ಹಾಗೂ 6 ಅಲ್ಯೂಮಿನಿಯಂ ಏಣಿಗಳನ್ನು ಕಳವು ಮಾಡಲಾಗಿತ್ತು.ಈ ಬಗ್ಗೆ ರಮೇಶ್ ಅವರು ಸೋಮವಾರಪೇಟೆ ಪೆÇಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೆÇಲೀಸರು ಅದೇ ಗ್ರಾಮದ ಹರೀಶ್ ಮತ್ತು ಮಂಜ ಎಂಬವರುಗಳು ಕಳವು ಮಾಡಿ ಬೇರೆ ಯವರಿಗೆ ಮಾರಾಟ ಮಾಡಿರು ವದನ್ನು ಪತ್ತೆಹಚ್ಚಿದ್ದಾರೆ. ಹರೀಶ್ನನ್ನು ಪೆÇಲೀಸರು ಬಂಧಿಸಿದ್ದರೆ ಮತ್ತೋರ್ವ ಆರೋಪಿ ಮಂಜ ತಲೆಮರೆಸಿಕೊಂಡಿದ್ದಾನೆ.
ಬಂಧಿತ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭ 56 ಸಾವಿರ ಮೌಲ್ಯದ ಮರ ಕುಯ್ಯುವ ಯಂತ್ರವನ್ನು 25 ಸಾವಿರಕ್ಕೆ ಹಾಗೂ 20 ಸಾವಿರ ಮೌಲ್ಯದ ಆಲ್ಯೂಮಿನಿಯಂ ಏಣಿಗಳನ್ನು 5 ಸಾವಿರಕ್ಕೆ ಮಾರಾಟ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ.ಮಾರಾಟ ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಂಡಿರುವ ಪೆÇಲೀಸರು, ಬಂಧಿತ ಆರೋಪಿಯನ್ನು ನ್ಯಾಯಾಲ ಯಕ್ಕೆ ಹಾಜರುಪಡಿಸಿದ ಮೇರೆ, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.(ಮೊದಲ ಪುಟದಿಂದ) ಡಿ.ವೈ.ಎಸ್.ಪಿ. ಶೈಲೇಂದ್ರ ಹಾಗೂ ವೃತ್ತ ನಿರೀಕ್ಷಕ ಮಹೇಶ್ ಅವರುಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ಪೆÇಲೀಸ್ ಠಾಣಾಧಿಕಾರಿ ಶ್ರೀಧರ್, ವಿರೂಪಾಕ್ಷ, ಸಿಬ್ಬಂದಿಗಳಾದ ಮಧು, ನವೀನ್, ಪ್ರವೀಣ್, ಬಸಪ್ಪ, ಶಿವಕುಮಾರ್, ರಮೇಶ್, ವೀಣಾ ಅವರುಗಳು ಭಾಗವಹಿಸಿದ್ದರು.