*ಕೊಡ್ಲಿಪೇಟೆ, ನ. 28: ಗಾಳಿ-ಮಳೆಗೆ ಹಾನಿಯಾಗಿರುವ ಮನೆಗಳ ದುರಸ್ತಿಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 10 ಸಾವಿರ ರೂಪಾಯಿಗಳ ಆರ್ಥಿಕ ನೆರವು ಒದಗಿಸಲಾಯಿತು.
ಸಮೀಪದ ಈಚಲಪುರ ಗ್ರಾಮದ ಸಿದ್ದಮ್ಮ ಈರಯ್ಯ ಹಾಗೂ ಆಗಳಿ ಗ್ರಾಮದ ತೀರ್ಥ ಜಗದೀಶ್ ಅವರುಗಳ ಮನೆ ಮಳೆಗೆ ಹಾನಿಗೀಡಾಗಿದ್ದು, ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾಡಳಿತದಿಂದ ಯಾವುದೇ ಸಹಾಯ ದೊರಕದ ಹಿನ್ನೆಲೆ ಸ್ವಸಹಾಯ ಸಂಘದವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗಮನ ಸೆಳೆದಿದ್ದರು.
ಅದರಂತೆ ಯೋಜನೆಯಿಂದ ಎರಡೂ ಕುಟುಂಬಗಳಿಗೆ ತಲಾ 10 ಸಾವಿರ ಸಹಾಯಧನ ಮಂಜೂರಾಗಿದ್ದು, ಯೋಜನೆಯ ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್ ಅವರು ಫಲಾನುಭವಿಗಳಿಗೆ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭ ಮದ್ಯವರ್ಜನಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವರಪ್ರಸಾದ್, ಯೋಜನೆಯ ವಲಯ ಮೇಲ್ವಿಚಾರಕ ರಮೇಶ್, ಸೇವಾ ಪ್ರತಿನಿಧಿಗಳಾದ ಸುಧಾ, ಶಾರದ, ಮಹಿಳಾ ಸ್ವಸಹಾಯ ಸಂಘದ ಸುನಂದ, ಶ್ವೇತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.