ನಾಪೆÇೀಕ್ಲು, ನ. 28: ಸಮೀಪದ ಹೊದ್ದೂರು ಗ್ರಾಮದ ಭಗವತಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ಬಿರುಸಿನಿಂದ ಸಾಗುತ್ತಿದ್ದು ಷಢಾಧಾರ ಪೂಜೆ ಹಾಗೂ ಗರ್ಭನ್ಯಾಸ ವಿಜೃಂಭಣೆಯಿಂದ ನೆರವೇರಿತು. ನೀಲೇಶ್ವರ ದಾಮೋದರ ಹಾಗೂ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

ಪುರಾತನ ದೇವಾಲ ಯವು ಶಿಥಿಲಗೊಂಡಿದ್ದು ದೇವಿಯ ವಿಗ್ರಹವು ವಿಘ್ನ ಗೊಂಡಿರುವುದರಿಂದ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ. ಬಾಲಾಲಯ ಪ್ರತಿಷ್ಠೆ, ಶಿಲಾನ್ಯಾಸ ಪೂಜೆ, ಪಾದುಕಾನ್ಯಾಸ ಪೂಜೆಗಳು ನಡೆದಿದ್ದು, ಗುರುವಾರ ಬೆಳಿಗ್ಗೆ ಗಣಪತಿ ಹೋಮ ನೆರವೇರಿಸಲಾಯಿತು. ಗರ್ಭನ್ಯಾಸ ರಾತ್ರಿ ಜರುಗಿತು.

ಹೊದ್ದೂರು ಗ್ರಾಮದಲ್ಲಿ 27 ತೆರಿಗೆ ಕುಟುಂಬಗಳಿದ್ದು, ಪ್ರತಿ ಕುಟುಂಬದಿಂದ ಒಬ್ಬರಂತೆ ಜೀರ್ಣೋದ್ಧಾರ ಸಮಿತಿ ಸದಸ್ಯರಾಗಿದ್ದು, ದೇವಿಯ ಕ್ಷೇತ್ರವನ್ನು ಶಿಲೆಯಲ್ಲಿ ನಿರ್ಮಿಸಲು ತೀರ್ಮಾನಿಸಿದ್ದಾರೆ ಎಂದು ಜೀರ್ಣೋದ್ಧಾರ ಸಮಿತಿಯ ಸದಸ್ಯ ವಾಂಚೀರ ಅಜಯ್ ಹೇಳಿದರು. ಪ್ರಧಾನ ಶಿಲ್ಪಿ ಬೆಳ್ತಂಗಡಿಯ ರಾಜೇಂದ್ರ, ವಾಸ್ತುಶಿಲ್ಪಿ ಕಾಸರಗೋಡಿನ ಬೆದರಡ್ಕ ರಮೇಶ್ ಕಾರಂತ, ಜೀರ್ಣೋದ್ಧಾರ ಸಮಿತಿ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು. - ದುಗ್ಗಳ ಸದಾನಂದ