ಗೋಣಿಕೊಪ್ಪ ವರದಿ, ನ. 26: ಬಾಳೆಲೆ ವ್ಯವಸಾಯ ಉತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘದ ಅಧ್ಯಕ್ಷರಾಗಿ ಅರಮಣಮಾಡ ಸುಗುಣ ಗಣಪತಿ, ಉಪಾಧ್ಯಕ್ಷರಾಗಿ ಮುಕ್ಕಾಟೀರ ಜಾನಕಿ ಕಾವೇರಪ್ಪ ಆಯ್ಕೆಯಾಗಿದ್ದಾರೆ.

ಗುರುವಾರ ಸಂಘದ ಸಭಾಂಗಣದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಮತ್ತೊಂದು ಬಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆದೇಂಗಡ ವಿನು ಉತ್ತಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ಅಳಮೇಂಗಡ ಸುರೇಶ್ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಅರಮಣಮಾಡ ಸುಗುಣ ಗಣಪತಿ 8-4, ಮುಕ್ಕಾಟೀರ ಜಾನಕ್ಕಿ ಕಾವೇರಪ್ಪ 8-3 ಮತಗಳಿಂದ ಗೆಲುವು ಪಡೆದರು.

ಈ ಸಂದರ್ಭ ಡಿಸಿಸಿ ನಿರ್ದೇಶಕ ರಘು ನಾಣಯ್ಯ, ಸರ್ಕಾರಿ ನಾಮಿನಿ ಮಂದೇಮಾಡ ಗಣಪತಿ, ನಿರ್ದೇಶಕರಾದ ಕಾಡ್ಯಮಾಡ ಉದಯ, ಅಡ್ಡೇಂಗಡ ಕಾಮುಣಿ, ಮಾಪಂಗಡ ಸಂಪತ್, ಎಸ್.ಸಿ. ಮುತ್ತಾ, ಪಣಿ ಎರವರ ರಾಜು, ಅಡ್ಡೇಂಗಡ ಅಜಯ್ ಇದ್ದರು. ಚುನಾವಣಾಧಿಕಾರಿ ರಘು, ಮೋಹನ್ ಇದ್ದರು. ಸ್ಥಳೀಯ ಬಿಜೆಪಿ ಮುಖಂಡರಾದ ಚೆಕ್ಕೇರ ಸೂರ್ಯ ಅಯ್ಯಪ್ಪ, ಅರಮಣಮಾಡ ರಂಜನ್ ಚೆಂಗಪ್ಪ, ಮಾಚಂಗಡ ಸುಜಾ ಪೂಣಚ್ಚ ವಿಜೇತರನ್ನು ಅಭಿನಂದಿಸಿ ಬಿಜೆಪಿ ಕಾರ್ಯಕರ್ತರು ಈ ಸಂದರ್ಭ ಪಾಲ್ಗೊಂಡಿದ್ದರು. ತೀವ್ರ ಪೈಪೋಟಿಯಿಂದಾಗಿ ಈ ಚುನಾವಣೆಗೆ ತೀವ್ರ ಕುತೂಹಲ ಕೆರಳಿಸಿತು.