*ಗೋಣಿಕೊಪ್ಪ, ನ. 23: ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಸಂಸದ ತೇಜಸ್ವಿ ಸೂರ್ಯ ಅವರನ್ನು ಕೊಡಗು ಯುವ ಸೇನೆ ವತಿಯಿಂದ ಸನ್ಮಾನಿಸಲಾಯಿತು.

ಬೆಂಗಳೂರಿನ ಸಂಸದರ ಕಚೇರಿಯಲ್ಲಿ ಅವರನ್ನು ಕೊಡಗು ಯುವಸೇನೆ ಪ್ರಮುಖರಾದ ಕುಲದೀಪ್ ಪೂಣಚ್ಚ, ಮಾಚೆಟ್ಟಿರ ಸಚಿನ್ ಮಂದಣ್ಣ,ಭರತ್ ದೇವಯ್ಯ ಅವರುಗಳು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ತೇಜಸ್ವಿ ಸೂರ್ಯ ಅವರು, ಕೊಡಗಿಗೆ ಭೇಟಿ ನೀಡಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸುವುದಾಗಿ ನುಡಿದರು.