ಸಿದ್ದಾಪುರ, ನ. 23: ಕಾಡಾನೆಗಳು ದೇವಾಲಯವೊಂದರ ಮುಂಭಾಗದ ಕಲ್ಲಿನ ದೀಪವನ್ನು ಹಾನಿಗೊಳಿಸಿರುವ ಘಟನೆ ವಾಲ್ನೂರು-ತ್ಯಾಗತ್ತೂರು ಗ್ರಾಮದಲ್ಲಿ ನಡೆದಿದೆ.

ಇತಿಹಾಸ ಪ್ರಸಿದ್ಧ ತ್ಯಾಗತ್ತೂರು ಗ್ರಾಮದ ಶ್ರೀ ಭಗವತಿ ದೇವಾಲಯದ ಮುಂಭಾಗದಲ್ಲಿರುವ ಕಲ್ಲಿನ ದೀಪಗಳನ್ನು ಕಾಡಾನೆಗಳು ಭಾನುವಾರ ರಾತ್ರಿ ತುಳಿದು ಹಾನಿಗೊಳಿಸಿವೆ. ಸೋಮವಾರದಂದು ಬೆಳಿಗ್ಗೆ ದೇವಾಲಯಕ್ಕೆ ಗ್ರಾಮಸ್ಥರು ತೆರಳಿದ ಸಂದರ್ಭ ಈ ವಿಚಾರ ತಿಳಿದು ಬಂದಿದೆ. ನಂತರ ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಾಲ್ನೂರು ತ್ಯಾಗತ್ತೂರು ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದ್ದು, ಈ ಬಗ್ಗೆ ಶಾಶ್ವತ ಯೋಜನೆಯನ್ನು ರೂಪಿಸಿ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.