ಚೆಟ್ಟಳ್ಳಿ, ನ. 22: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಬ್ಲಡ್ ಡೋನರ್ಸ್ ಫೆÇೀರಮ್ ವತಿಯಿಂದ ಹಾಕತ್ತೂರಿನ ಮದೀನ ಕಾಂಪ್ಲೆಕ್ಸ್‍ನಲ್ಲಿ ರಕ್ತದಾನ ಶಿಬಿರ ನಡೆಯಿತು.
ಪಿಎಫ್‍ಐ ಹಾಕತ್ತೂರು ವಲಯ ಅಧ್ಯಕ್ಷ ಅಬ್ದುಲ್ ಖಾದರ್ ಅಧ್ಯಕ್ಷತೆಯಲ್ಲಿ ನಡೆದ ಶಿಬಿರವನ್ನು ಕರ್ನಾಟಕ ಮುಸ್ಲಿಂ ಜಮಾಅತ್‍ನ ಮಡಿಕೇರಿ ತಾಲೂಕು ಅಧ್ಯಕ್ಷ ಅಬೂಬಕ್ಕರ್ ಹಾಜಿ ಅವರು ಪ್ರಾರ್ಥನೆಯ ಮೂಲಕ ಉದ್ಘಾಟಿಸಿದರು.
ಶಿಬಿರದಲ್ಲಿ 40ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. ವೈದ್ಯ ಕರುಂಬಯ್ಯ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಿಎಫ್‍ಐ ಜಿಲ್ಲಾ ಕಾರ್ಯದರ್ಶಿ ತುಫೈಲ್ ಮಡಿಕೇರಿ, ಹಾಕತ್ತೂರು ಜಮಾಅತ್ ಅಧ್ಯಕ್ಷ ಅಬ್ದುಲ್ಲ ಹಾಜಿ, ಉಪಾಧ್ಯಕ್ಷ ಖಾಸಿಂ, ಜಮಾಅತ್ ಮಾಜಿ ಅಧ್ಯಕ್ಷ ಪಿ.ಎಂ. ಅಬ್ದುಲ್ಲ, ಪಿಎಫ್‍ಐ ವೀರಾಜಪೇಟೆ ಶಾಖೆ ಅಧ್ಯಕ್ಷ ಇಬ್ರಾಹಿಂ ಗೋಣಿಕೊಪ್ಪ, ಕ್ರಿಯೇಟಿವ್ ಖಲೀಲ್ ಮಡಿಕೇರಿ, ಪಿಎಫ್‍ಐ ಕೊಡಗು ಜಿಲ್ಲಾ ವೈದ್ಯಕೀಯ ಉಸ್ತುವಾರಿ ಉನೈಸ್ ಮಡಿಕೇರಿ ಮತ್ತು ಕೊಡಗು ಜಿಲ್ಲಾ ವೈದ್ಯಕೀಯ ಸಿಬ್ಬಂದಿಗಳು ಹಾಜರಿದ್ದರು. ಅಲ್ತಾಫ್ ಸ್ವಾಗತಿಸಿ, ನಿಸಾರ್ ವಂದಿಸಿದರು.