ನಾಪೋಕ್ಲು, ನ. 22: ಸಮೀಪದ ಹೊದವಾಡ ಗ್ರಾಮದ ವಿವಿದೋದ್ಧೇಶ ಸಹಕಾರ ಸಂಘದಲ್ಲಿ ಕಳೆದ 28 ವರ್ಷಗಳಿಂದ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿದ ಬಿ. ಸಾವಿತ್ರಿ ಪೂಣಚ್ಚ ಅವರನ್ನು ಬೀಳ್ಕೊಡಲಾಯಿತು. ಸಂಘದ ಅಧ್ಯಕ್ಷ ಮಂಡೇಡ ಬಾಬು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ಎ.ಪಿ. ಶಾಂತಿ ನಿರ್ದೇಶಕರಾದ ಎಂ.ಎ. ನಂದ, ಎ.ಬಿ. ಪದ್ಮ, ಬಿ.ಪಿ. ಗಂಗಮ್ಮ, ಎಂ.ಎಂ. ಲಲಿತ, ವೇಲಾಯುಧನ್ ಸೇರಿದಂತೆ ಇನ್ನಿತರರು ಸನ್ಮಾನಿಸಿದರು.