ಪೆರಾಜೆ, ನ. 22: ದೀಪಾವಳಿ ಹಬ್ಬದ ಸಂಭ್ರಮದ ನಡುವೆ ದೇಶದಾದ್ಯಂತ ಪುಣ್ಯಕೋಟಿಯ ಪೂಜೆ ಮಾಡುವುದು ಕೂಡ ಒಂದು ವಿಶೇಷ.

ಹಿಂದೂ ಜಾಗರಣಾ ವೇದಿಕೆ ಪೆರಾಜೆ ನಿಡ್ಯಮಲೆ ಸಮಿತಿಯಿಂದ ನಿಡ್ಯಮಲೆ ಡಿಶನ್ ಗಿರೀಶ್ ಅವರ ಮನೆಯಲ್ಲಿ ಗೋ ಪೂಜೆ ಕಾರ್ಯಕ್ರಮ ನಡೆಯಿತು. ಈ ಕಾರ್ಯದಲ್ಲಿ ಹಿಂದೂ ಜಾಗರಣಾ ವೇದಿಕೆ ಗೌರವಾಧ್ಯಕ್ಷ ಸೀತಾರಾಮ ಕದಿಕಡ್ಕ ಗೋವುಗಳ ಪವಿತ್ರತೆಯ ಬಗ್ಗೆ ವಿವರಿಸಿದರು.

ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ಮನೋಜ್ ಕುಂಟಿಕಾನ ಅಧ್ಯಕ್ಷತೆ ವಹಿಸಿದ್ದರು. ಗ್ರೀಷ್ಮ ನಿಡ್ಯಮಲೆ ಪ್ರಾರ್ಥಿಸಿ, ರಜಿತ್ ಪಾತಿಕಲ್ಲು ನಿರೂಪಿಸಿ, ನೋಹಿತ್ ನಿಡ್ಯಮಲೆ ಸ್ವಾಗತಿಸಿ, ತಿಲೇಶ್ ನಿಡ್ಯಮಲೆ ವಂದಿಸಿದರು.