ಕೂಡಿಗೆ, ನ. 22: ಚೆನೈನ ಕೊಪುಕೀನ್ ಶಿಟೋ ರಿಯೋ ಕರಾಟೆ ಸಂಸ್ಥೆಯ ವತಿಯಿಂದ ನಡೆದ ರಾಷ್ಟ್ರೀಯ ಮಹಾತ್ಮಗಾಂಧಿ ಇಪ್ಪತ್ತೊಂದನೆಯ ಕರಾಟೆ ಕಟ್ ಆನ್ಲೆನ್ ಚಾಂಪಿಯನ್ಶಿಪ್ನಲ್ಲಿ ಕೊಡಗು ಮತ್ತು ಮೈಸೂರು ಜಿಲ್ಲೆಯ 16 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ 5 ಚಿನ್ನದ ಪದಕ, 6 ಬೆಳ್ಳಿ ಪದಕ 5 ಕಂಚಿನ ಪದಕವನ್ನು ಪಡೆದಿರುತ್ತಾರೆ. ಬ್ಲ್ಯಾಕ್ಬೆಲ್ಟ್ ವಿಭಾಗದಲ್ಲಿ ನಡುವಟ್ಟೀರ ಎನ್. ರಾಹುಲ್, ಮುಕ್ಕಾಟಿರ ಗೌತಮಿ, ಕುದುಸಜೆ ಕೋಯಲ್, ಅಲ್ತಾಫ್, ರಹಿಮಾನ್, ಮಹಮ್ಮದ್, ಸೋಯಬ್. ಕಲರ್ ಬೆಲ್ಟ್ ವಿಭಾಗದಲ್ಲಿ ಪಿ. ವೈಭವ, ವೈಸ್ಟನ್, ಬಿ.ಟಿ. ಸಂತೋಷ ಮತ್ತು ಮಿಲಿಂದ್ ನಾರಾಯಣ ಇವರುಗಳಿಗೆ ತರಬೇತು ದಾರರಾಗಿ ರಿನ್ಸಿ, ಮಹಮ್ಮದ್ ಇಕ್ಬಾಲ್ ನೇತೃತ್ವದಲ್ಲಿ ತರಬೇತಿ ನಡೆದಿದೆ.