ಕಣಿವೆ, ನ. 22: ಹೆಬ್ಬಾಲೆ ಗ್ರಾಮದ ಅಧಿ ದೇವತೆಯಾದ ವನ ದೇವತೆ ಬನಶಂಕರಿ ಅಮ್ಮನವರ ಪೂಜೋತ್ಸವವನ್ನು ಈ ಬಾರಿ ಸರಳವಾಗಿ ಆಚರಿಸಲು ಗ್ರಾಮದ ದೇವಾಲಯ ಸಮಿತಿ ತೀರ್ಮಾನಿಸಿದೆ.

ಕೊರೊನಾ ಕಾರಣದಿಂದ ಜಿಲ್ಲಾಡಳಿತ ಅನುಮತಿ ನೀಡಲು ನಿರಾಕರಿಸಿರುವುದರಿಂದ ಲಕ್ಷಾಂತರ ಭಕ್ತರು ಸೇರುವ ಈ ಹಬ್ಬದ ಉತ್ಸವವನ್ನು ಇದೇ ಮೊದಲ ಬಾರಿಗೆ ಸರಳವಾಗಿ ಹಾಗೂ ಸಾಂಕೇತಿಕವಾಗಿ ಆಚರಿಸಲು ಸಮಿತಿ ತೀರ್ಮಾನಿಸಿದೆ. ಡಿಸೆಂಬರ್ 15 ರಂದು ಗ್ರಾಮ ದೇವತೆ ಹಬ್ಬವನ್ನು ಆಚರಿಸಲಾಗುತ್ತಿದೆ.