ಸೋಮವಾರಪೇಟೆ, ನ. 22: ಇಲ್ಲಿನ ಜೇಸೀ ಸಂಸ್ಥೆಯ ವತಿಯಿಂದ ಪಟ್ಟಣದ ವಿವೇಕಾನಂದ ವೃತ್ತದ ಬಳಿ ಪಟ್ಟಣಕ್ಕೆ ಸ್ವಾಗತ ಕೋರುವ ನಾಮಫಲಕವನ್ನು ಅನಾವರಣಗೊಳಿಸಲಾಯಿತು.

ಈ ಸಂದರ್ಭ ಜೇಸೀ ಸಂಸ್ಥೆಯ ಅಧ್ಯಕ್ಷೆ ಉಷಾರಾಣಿ, ಸಂಸ್ಥೆಯ ಮಾಜಿ ಅಧ್ಯಕ್ಷರುಗಳಾದ ಪುರುಷೋತ್ತಮ್, ಗಿರೀಶ್, ಸೋಮೇಶ್, ಮಮತ, ಪ್ರಕಾಶ್ ಸೇರಿದಂತೆ ಪ್ರಮುಖರಾದ ಮಂಜುಳಾ ಸುಬ್ರಮಣಿ, ಎಂ.ಎ. ರುಬೀನಾ, ನಿಯೋಜಿತ ಅಧ್ಯಕ್ಷೆ ಮಾಯಾ ಗಿರೀಶ್, ವಿದ್ಯಾ ಸೇರಿದಂತೆ ಇತರರು ಉಪಸ್ಥಿತರಿದ್ದರು.