ವೀರಾಜಪೇಟೆ, ನ. 22: ಶತಮಾನಗಳ ಹಿಂದೆ ರಾಜರ ಆಳ್ವಿಕೆಯ ನಂತರ ಬ್ರಿಟಿಷರ ಆಡಳಿತದಲ್ಲಿ ಇಲ್ಲಿನ ಜೈನರ ಬೀದಿಯಲ್ಲಿ ನಿರ್ಮಿಸಲಾಗಿದ್ದ ದೊಡ್ಡ ಕಟ್ಟಡವೊಂದನ್ನು ವೀರಾಜಪೇಟೆ ಲೋಕೋಪಯೋಗಿ ಇಲಾಖೆ ವೀರಾಜಪೇಟೆ, ನ. 22: ಶತಮಾನಗಳ ಹಿಂದೆ ರಾಜರ ಆಳ್ವಿಕೆಯ ನಂತರ ಬ್ರಿಟಿಷರ ಆಡಳಿತದಲ್ಲಿ ಇಲ್ಲಿನ ಜೈನರ ಬೀದಿಯಲ್ಲಿ ನಿರ್ಮಿಸಲಾಗಿದ್ದ ದೊಡ್ಡ ಕಟ್ಟಡವೊಂದನ್ನು ವೀರಾಜಪೇಟೆ ಲೋಕೋಪಯೋಗಿ ಇಲಾಖೆ ಪೊಲೀಸ್ ಉಪ ಬಂಧಿಖಾನೆಯಾಗಿ ಬಳಸುತ್ತಿದ್ದರು. ಈ ಕಟ್ಟಡದಲ್ಲಿ ಪೊಲೀಸ್ ಠಾಣೆ, ಇದಕ್ಕೆ ಸಂಬಂಧಿಸಿದ ಕಚೇರಿ, ಪ್ರತ್ಯೇಕ, ಪ್ರತ್ಯೇಕವಾಗಿ ಉಪ ಬಂಧಿಖಾನೆಗಳು ಕಾರ್ಯ ನಿರ್ವಹಿಸುತಿದ್ದವು.

ಬ್ರಿಟಿಷರ ಆಳ್ವಿಕೆ ಕೊನೆಗೊಂಡ ನಂತರ 1950 ರಲ್ಲಿ ಲೋಕೋಪಯೋಗಿ ಇಲಾಖೆ ಅಸ್ತಿತ್ವಕ್ಕೆ ಬಂದ ನಂತರ ಇಲಾಖೆ ಈ ಕಟ್ಟಡವನ್ನು ಇಲಾಖೆ ಸಿಬ್ಬಂದಿಗಳ ವಸತಿ ಗೃಹವಾಗಿ ಬಳಸುತಿತ್ತು. ವೀರಾಜಪೇಟೆ ಸಿದ್ದಾಪುರ ರಸ್ತೆಯಿಂದ ತೆಲುಗರ ಬೀದಿ, ಜೈನರಬೀದಿ, ಫೀ.ಮಾರ್ಷಲ್ ರಸ್ತೆ, ಮುಖ್ಯರಸ್ತೆ ಮಾರ್ಗವಾಗಿ ಕೇರಳ ರಾಜ್ಯ ಸಂಪರ್ಕದ ರಾಜ್ಯ ಹೆದ್ದಾರಿ ಹಾದು ಹೋಗುವುದರಿಂದ ರಸ್ತೆ ಅಗಲೀಕರಣಕ್ಕಾಗಿ ಈ ಹಳೆಯದಾದ ಕಟ್ಟಡವನ್ನು ಲೋಕೋಪಯೋಗಿ ಇಲಾಖೆ ಕೆಡವಿದೆ.

ಈ ಹಳೆಯದಾದ ಕಟ್ಟಡ ಸುಮಾರು 60 ಸೆಂಟು ಜಾಗವನ್ನು ಹೊಂದಿದ್ದು, ವೀರಾಜಪೇಟೆ ಪಟ್ಟಣದಲ್ಲಿ ರಸ್ತೆ ಅಗಲೀಕರಣವಾದರೆ ಇದನ್ನು ಪೇ ಪಾರ್ಕಿಂಗ್‍ಗಾಗಿ ಬಳಸಲು ಸೂಕ್ತವಾಗಿದೆ. ಈ ಸರಕಾರಿ ಜಾಗ ವಾಹನ ಪಾರ್ಕಿಂಗ್ ಆಗಿ ಪರಿವರ್ತನೆಯಾದರೆ ಸುಮಾರು 120ರಿಂದ 150ಕ್ಕೂ ಅಧಿಕ ವಾಹನಗಳನ್ನು ವಿಶಾಲವಾದ ಜಾಗದಲ್ಲಿ ನಿಲ್ಲಿಸಬಹುದು. ಪೇ ಪಾರ್ಕಿಂಗ್ ಟೆಂಡರ್‍ನಿಂದಲೂ ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಆದಾಯವನ್ನು ನಿರೀಕ್ಷಿಸ ಬಹುದಾಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.