ಸೋಮವಾರಪೇಟೆ, ನ. 22: ಇಲ್ಲಿನ ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರ ಜನ್ಮ ದಿನವನ್ನು ಆಚರಿಸಲಾಯಿತು.
ಇಲ್ಲಿನ ಪುಟ್ಟಪ್ಪ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ಪಟ್ಟಣ ಪಂಚಾಯಿತಿ ಸದಸ್ಯ ಉದಯಶಂಕರ್ ಮಾಲಾರ್ಪಣೆ ಮಾಡಿದರು.
ಈ ಸಂದರ್ಭ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು, ಕಾರ್ಯದರ್ಶಿ ಹೆಚ್.ಬಿ. ರಾಜಪ್ಪ, ಪದಾಧಿಕಾರಿಗಳಾದ ಹೆಚ್.ಒ. ಪ್ರಕಾಶ್, ಡಿ.ಜೆ. ಅಜಯ್, ಕೆ. ಮಂಜು, ಪಳನಿಸ್ವಾಮಿ, ಪುನೀತ, ಹರೀಶ, ನವೀನ, ರಘು, ಆರ್. ರಾಜು ಹಾಗೂ ಬಸವ ಪಾಲ್ಗೊಂಡಿದ್ದರು.