ಮಡಿಕೇರಿ, ನ. 21: ಅಕ್ರಮ ಗೋಸಾಗಾಟ ಸಂದರ್ಭ ಹಿಂದೂ ಜಾಗರಣ ವೇದಿಕೆಯಿಂದ ದಾಳಿ ನಡೆಸಿ 4 ಗೋವುಗಳ ರಕ್ಷಣೆ ಮಾಡಲಾಗಿದೆ.

ವೀರಾಜಪೇಟೆ ತಾಲೂಕಿನ ಅಮ್ಮತ್ತಿಯ ಬಳಿ ಶೇಕ್ ಉಸ್ಮಾನ್ ಎಂಬಾತನ ಮಾಲೀಕತ್ವದ ತನ್ವೀರ್ ಎಂಬಾತ ಚಾಲನೆ ಮಾಡುತ್ತಿದ್ದ ಕೆಎ - 12 - ಬಿ - 4625 ಸಂಖ್ಯೆಯ ಮ್ಯಾಕ್ಸಿಮೋ ಗೂಡ್ಸ್ ವಾಹನದಲ್ಲಿ 4 ಗೋವುಗಳನ್ನು ಅಕ್ರಮವಾಗಿ ಗೋಮಾಂಸ ಮಾಡಲು ಸಾಗಿಸುತ್ತಿದ್ದ ಸಂದರ್ಭ ದಾಳಿ ನಡೆಸಿದ ಹಿಂದೂ ಜಾಗರಣ ವೇದಿಕೆಯ ಅಮ್ಮತ್ತಿ ವಲಯ ಕಾರ್ಯಕರ್ತರ ತಂಡ ವಾಹನ ಸಮೇತ ಆರೋಪಿಯನ್ನು ಸೆರೆ ಹಿಡಿದು ಪೆÇಲೀಸರ ವಶಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ.

ರಕ್ಷಣೆ ಮಾಡಿರುವ 4 ಗೋವುಗಳನ್ನು ಸ್ಥಳೀಯ ಕಾಮಧೇನು ಗೋಶಾಲೆಯ ಸ್ವಾಧೀನಕ್ಕೆ ನೀಡಲಾಗಿದೆ. ಆರೋಪಿಯನ್ನು ಬಂಧಿಸಿರುವ ಪೆÇಲೀಸರು ವೀರಾಜಪೇಟೆ ಗ್ರಾಮಾಂತರ ಪೆÇೀಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.