ಮಡಿಕೇರಿ, ನ. 21: ಕೊಡವ ಜನಾಂಗವು, ಪ್ರಪಂಚದ ಅತೀ ಕಡಿಮೆ ಜನಸಂಖ್ಯೆಯುಳ್ಳ ಜನಾಂಗವಾಗಿದ್ದು, ವಿಶಿಷ್ಟ ಶ್ರೀಮಂತ ಸಂಸ್ಕøತಿ-ಸಂಪ್ರದಾಯವನ್ನು ಹೊಂದಿದೆ. ಸೇನೆ, ಕ್ರೀಡೆ, ಸಾಹಿತ್ಯ ಹಾಗೂ ಸಿನಿಮಾ ಕ್ಷೇತ್ರಕ್ಕೂ ಕೊಡುಗೆ ನೀಡಿದೆ. ಆದ್ದರಿಂದ ಕೊಡವ ಜನಾಂಗದ ಸರ್ವತೋಮುಖ ಅಭಿವೃದ್ಧಿಗಾಗಿ ಕೊಡವ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕೆಂದು ‘ಕೊಡವಾಮೆರ ಕೊಂಡಾಟ’ ಸಂಘಟನೆ ಇ-ಮೇಲ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.