ಮಡಿಕೇರಿ, ನ. 21: ಮದೆ ಗ್ರಾಮ ಪಂಚಾಯಿತಿಯ ಮಿಶನ್ ಅಂತ್ಯೋದಯ ಗ್ರಾಮಸಭೆಯನ್ನು ಆಡಳಿತಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಹಾಗೂ ನೋಡಲ್ ಅಧಿಕಾರಿ ಉಪಸ್ಥಿತಿಯಲ್ಲಿ ತಾ. 25ರಂದು ಮದೆ ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಸಮಯ ಬೆಳಿಗ್ಗೆ 11 ಗಂಟೆಗೆ ನಡೆಸಲು ತೀರ್ಮಾನಿಸಲಾಗಿದೆ.

ಮದೆ ಗ್ರಾಮ ಪಂಚಾಯಿತಿಯ ಜಮಾಬಂದಿ ಕಾರ್ಯಕ್ರಮ ಕೂಡ ಅಂದು ಪಂಚಾಯಿತಿಯ ಸಭಾಂಗಣದಲ್ಲಿ ಬೆಳಿಗ್ಗೆ 12 ಗಂಟೆಗೆ ನಡೆಯಲಿದೆ.