ಶನಿವಾರಸಂತೆ, ನ. 19: ಪಟ್ಟಣದ ಭಾರತಿ ವಿದ್ಯಾಸಂಸ್ಥೆಯಲ್ಲಿ ಆರ್.ಕೆ. ಪ್ರೊಡಕ್ಸನ್ ವತಿಯಿಂದ ‘1980 ನಡೆಯುವ ಕಥೆ’ ಎಂಬ ಚಲನಚಿತ್ರದ ಚಿತ್ರೀಕರಣ ನಡೆಯುತ್ತಿದೆ.

ನಿರ್ದೇಶಕ ಜೆ. ರಾಜಕಿರಣ್ ನಿರ್ದೇಶನದಲ್ಲಿ ಪ್ರಿಯಾಂಕ ಉಪೇಂದ್ರ ನಾಯಕಿಯಾಗಿ ನಟಿಸುತ್ತಿದ್ದಾರೆ. ಅವರ ಜೊತೆ ಹಿರಿಯ ನಟ ರಮೇಶ್ ಪಂಡಿತ್, ಸಹಕಲಾವಿದರಾದ ಅರವಿಂದ್ ರಾವ್ ಹಾಗೂ ಶ್ರೀನಿವಾಸ ನಟಿಸುತ್ತಿದ್ದ ದೃಶ್ಯದ ಚಿತ್ರೀಕರಣ ಸಂಸ್ಥೆಯ ಕೊಠಡಿಯೊಂದರಲ್ಲಿ ನಡೆಯಿತು. ಚಿತ್ರಕ್ಕೆ ಜಿನಂತ್ ವಿಕಾಸ್ ಅವರ ಸಂಗೀತವಿದ್ದು, ಜೀವ ಆ್ಯಂಟೋನಿ ಕ್ಯಾಮರಾ ಮೆನ್ ಆಗಿದ್ದಾರೆ. ನಟಿ ಪ್ರಿಯಾಂಕಾ ಪತ್ರಿಕೆಯೊಂದಿಗೆ ಮಾತನಾಡಿ, ಶನಿವಾರಸಂತೆಯಲ್ಲಿ 2 ವಾರ ಚಿತ್ರೀಕರಣ ನಡೆಯಲಿದೆ ಎಂದು ಹೇಳಿದರು.