ವೀರಾಜಪೇಟೆ, ನ. 19: ಪಟ್ಣಣದಲ್ಲಿರುವ ಕೆರೆಗಳನ್ನು ಅಭಿವೃದ್ದಿ ಪಡಿಸಿ ಗುತ್ತಿಗೆ ಆಧಾರದಲ್ಲಿ ಮೀನು ಸಾಕಾಣೆಗೆ ಅವಕಾಶ ಮಾಡಿಕೊಟ್ಟರೆ ಪಟ್ಟಣ ಪಂಚಾಯಿತಿಗೆ ಆದಾಯ ಬರುತ್ತದೆ. ಸ್ವಾವಲಂಭಿ ಬದುಕು ಸಾಗಿಸಲು ಯುವಕರಿಗೆ ಅನುಕೂಲವಾಗುತ್ತದೆ ಎಂದು ವೀರಾಜಪೇಟೆ ಶಾಸಕೆ ಕೆ.ಜಿ. ಬೋಪಯ್ಯ ಹೇಳಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಛತ್ರಕೆರೆಗೆ ಮೀನುಮರಿಗಳನ್ನು ಬಿಟ್ಟು ಅವರು ಮಾತನಾಡಿದರು. ಮೀನು ಸಾಕಾಣೆ ಒಂದು ಒಳ್ಳೆಯ ಉದ್ಯೋಗ. ಸರ್ಕಾರ ಕೂಡ ಮೀನು ಸಾಕಾಣೆಗೆ ಉತ್ತೇಜನ ನೀಡುತ್ತಿದೆ. ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶ್ಮಿತಾ, ಉಪಾಧ್ಯಕ್ಷ ಹರ್ಷವರ್ಧನ್, ಮುಖ್ಯಾಧಿಕಾರಿ ಶ್ರೀಧರ್, ಅಭಿಯಂತರ ಹೇಮಕುಮಾರ್, ಗುತ್ತಿಗೆದಾರ ಅರುಣ್ ಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯರು ಹಾಜರಿದ್ದರು.